ಪುತ್ತೂರು: ದೇಯಿ ಬೈದ್ಯೆತಿ – ಕೋಟಿ ಚೆನ್ನಯ ಮೂಲಸ್ಥಾನ ಕ್ಷೇತ್ರ ಗೆಜ್ಜೆಗಿರಿ ನಂದನ ಬಿತ್ತ್ ಲ್ ನಲ್ಲಿ ಪ್ರಥಮ ವರ್ಷದ ಪ್ರತಿಷ್ಠಾ ವರ್ಧಂತಿ ಮತ್ತು ಜಾತ್ರಾ ಮಹೋತ್ಸವ ಫೆ. 26ರಿಂದ ಮಾಚ್೯
02 ರವರೆಗೆ ವೈದಿಕ ಮತ್ತು ತೌಳವ ವಿಧಿ ವಿಧಾನಗಳ ಮೂಲಕ ನಡೆಯಲಿದೆ.ಈ ಸಂಬಂಧ ಜಾತ್ರಾ ಮಹೋತ್ಸವ ಸಮಿತಿ ರಚಿಸಲಾಗಿದ್ದು, ಪರ್ಪುಂಜ ರಾಮ್ ಜಾಲ್ಶ್ರೀ ಬ್ರಹ್ಮಬೈದರ್ಕಳ ಗರಡಿ ಕ್ಷೇತ್ರದ ಆಡಳಿತ ಮೊಕ್ತೇಸರರಾದ ಕೂರೇಲು ಸಂಜೀವ ಪೂಜಾರಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಕ್ಷೇತ್ರದ ಯಜಮಾನರಾದ ಶ್ರೀಧರ ಪೂಜಾರಿ ಅವರ ಮಾರ್ಗದರ್ಶನ ಮತ್ತು ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ಜಯಂತ ನಡುಬೈಲ್ ಅವರ ಅಧ್ಯಕ್ಷತೆಯಲ್ಲಿ ಗೆಜ್ಜೆಗಿರಿಯಲ್ಲಿ ನಡೆದ ಸಭೆಯಲ್ಲಿ ಸಮಿತಿ ರಚಿಸಲಾಗಿದ್ದು, ಜಾತ್ರೋತ್ಸವ ಅದ್ದೂರಿಯಾಗಿ ನಡೆಸಲು ನಿರ್ಧರಿಸಲಾಯಿತು.
5 ದಿನಗಳ ಉತ್ಸವ ಧ್ವಜಾರೋಹಣದೊಂದಿಗೆ ಆರಂಭಗೊಳ್ಳಲಿದ್ದು, ಆದಿ ದೈವ ಧೂಮಾವತಿ, ಕುಪ್ಪೆ ಪಂಜುರ್ಲಿ,ಕಲ್ಲಾಲ್ದಾಯ, ಕೊರತಿ ನೇಮೋತ್ಸವ, ಮೂಲಸ್ಥಾನ ಗರಡಿ ನೇಮೋತ್ಸವ, ದೇಯಿ ಬೈದ್ಯೆತಿ ನೇಮೋತ್ಸವ ಇತ್ಯಾದಿ ಕಾರ್ಯಕ್ರಮಗಳು ನಡೆಯಲಿವೆ.
ಜಾತ್ರಾ ಮಹೋತ್ಸವ ಸಮಿತಿ ಗೌರವಾಧ್ಯಕ್ಷರಾಗಿ ಬಲ್ಯೊಟ್ಟು ಕ್ಷೇತ್ರದ ಶ್ರೀ ವಿಖ್ಯಾತಾನಂದ ಸ್ವಾಮೀಜಿ ಆಯ್ಕೆಯಾಗಿದ್ದು, ಕಾರ್ಯಾಧ್ಯಕ್ಷರಾಗಿ ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷರಾದ ಡಾ. ರಾಜಾರಾಂ ಉಪ್ಪಿನಂಗಡಿ, ಸಂಚಾಲಕರಾಗಿ ಸಾಮಾಜಿಕ ಮುಖಂಡ ಸತ್ಯಜಿತ್ ಸುರತ್ಕಲ್, ಉಪಾಧ್ಯಕ್ಷರಾಗಿ ಗುಂಡ್ಯಡ್ಕ ವಾಸು ಪೂಜಾರಿ, ರವಿ ಕಕ್ಕೆಪದವು, ಪ್ರಧಾನ ಕಾರ್ಯದರ್ಶಿಯಾಗಿ ಮೋಹನದಾಸ್ ವಾಮಂಜೂರು, ಜತೆ ಕಾರ್ಯದರ್ಶಿಯಾಗಿ ಜನಾರ್ದನ ಪದಡ್ಕ, ಕೋಶಾಧಿಕಾರಿಯಾಗಿ ದೀಪಕ್ ಕೋಟ್ಯಾನ್ ಅವರನ್ನು ಆರಿಸಲಾಯಿತು.
ಉಪ ಸಮಿತಿಗಳ ರಚನೆ:
ಇದೇ ವೇಳೆ ನಾನಾ ಉಪ ಸಮತಿಗಳನ್ನು ರಚಿಸಿ ಸಂಚಾಲಕರನ್ನು ಆರಿಸಲಾಯಿತು.ನಾರಾಯಣ ಪೂಜಾರಿ ಮಡ್ಯಂಗಳ (ಚಪ್ಪರ ಸಮಿತಿ), ಪ್ರಸಾದ್ ಅಂಚನ್, ಎಸ್.ಆರ್. ವಿಜಯ್ ಮತ್ತು ಬಾಲಕೃಷ್ಣ (ಪಾಕಶಾಲೆ ಸಮಿತಿ), ಸೇಸಪ್ಪ ಪೂಜಾರಿ ಕಡಮಗದ್ದೆ (ಊಟೋಪಚಾರ ಸಮಿತಿ), ಯಶವಂತ ದೇರಾಜೆಗುತ್ತು (ಸ್ವಚ್ಛತಾ ಸಮಿತಿ), ಯುವವಾಹಿನಿ ಕೇಂದ್ರ ಸಮಿತಿ (ಕಾರ್ಯಾಲಯ ಸಮಿತಿ), ರಾಜೇಂದ್ರ ಚಿಲಿಂಬಿ, ಜಯಪ್ರಕಾಶ್ ಬದಿನಾರ್(ಪ್ರಚಾರ ಸಮಿತಿ), ಪ್ರಸಾದ್ ಇರ್ದೆ(ನೀರಾವರಿ ಸಮಿತಿ), ಸುಜಿತ್ ಬಂಗೇರ (ಹೊರಾಂಗಣ ಅಲಂಕಾರ ಸಮಿತಿ), ರವಿ ಕೂರೇಲು ನೇತೃತ್ವದ ಮಲರಾಯ ದೈವಸ್ಥಾನ ಸೇವಾ ಸಮಿತಿ ಕೂರೇಲು (ಒಳಾಂಗಣ ಅಲಂಕಾರ ಸಮಿತಿ), ಹರೀಶ್ ಕೊಣಾಜೆ, ರವೀಂದ್ರ ಕೊಣಾಜೆ (ಪ್ರಸಾದ ತಯಾರಿಕಾ ಸಮಿತಿ), ಮಂಜುನಾಥ ಸಾಲಿಯಾನ್ (ಹೊರೆಕಾಣಿಕೆ ಸಮಿತಿ), ಗಿರೀಶ್ ಕನ್ನಡ್ಕ (ಉಗ್ರಾಣ ಸಮಿತಿ), ಡಾ. ನವೀನ್ ಕುಮಾರ್ ಮರಿಕೆ (ವೇದಿಕೆ ಸಮಿತಿ), ಗುಣಕರ ಅಗ್ನಾಡಿ (ದೀಪಾಲಂಕಾರ ಸಮಿತಿ), ವಿನಯಾ ಬಲ್ನಾಡ್, ರಾಜಶ್ರೀ ರಮಣ್ ಬೆಳ್ತಂಗಡಿ, ನಳಿನಾಕ್ಷಿ ಮುಡಿಪು (ಮಹಿಳಾ ಸಮಿತಿ), ರಾಮಚಂದ್ರ, ದೀಪಕ್, ಪ್ರವೀಣ್ ಅಂಚನ್ (ಸ್ವಯಂ ಸೇವಕ ನಿರ್ವಹಣಾ ಸಮಿತಿ), ಡಾ. ಆಶಿತ್ ಎಂ. ವಿ. (ಆರೋಗ್ಯ ಸಮಿತಿ) ರಚಿಸಲಾಯಿತು
ಸಭೆಯಲ್ಲಿ ಆಶೀರ್ವಚನ ನೀಡಿದ ಬಲ್ಯೊಟ್ಟು ಶ್ರೀ ವಿಖ್ಯಾತಾನಂದ ಸ್ವಾಮೀಜಿ, ಇತಿಹಾಸ ನಿರ್ಮಿಸಿದ ಗೆಜ್ಜೆಗಿರಿಯ ಬ್ರಹ್ಮಕಲಶೋತ್ಸವದ ಯಶಸ್ಸಿನ ಹೆಜ್ಜೆಯಲ್ಲಿ ಪ್ರಥಮ ವರ್ಷದ ಜಾತ್ರಾ ಮಹೋತ್ಸವವೂ ಉತ್ತಮವಾಗಿ ನಡೆಯಲಿ ಎಂದು ಹಾರೈಸಿದರು. ಸಮಿತಿಯ ನೂತನ ಅಧ್ಯಕ್ಷ ಕೂರೇಲ್ ಸಂಜೀವ ಪೂಜಾರಿ ಮಾತನಾಡಿ, ಎಲ್ಲ ಉಪ ಸಮಿತಿಗಳ ಸದಸ್ಯರ ಆಯ್ಕೆ ಒಂದೆರಡು ದಿನಗಳಲ್ಲಿ ನಡೆಯಲಿದ್ದು, ನಂತರ ಇಡೀ ತಂಡ ಪೂರ್ಣ ಪ್ರಮಾಣದಲ್ಲಿ ಜಾತ್ರೋತ್ಸವಕ್ಕಾಗಿ ಶ್ರಮಿಸಲಿದೆ ಎಂದರು.
ಕ್ಷೇತ್ರಾಡಳಿತ ಸಮಿತಿಯ ಅಧ್ಯಕ್ಷ ಜಯಂತ ನಡುಬೈಲ್ ಉತ್ಸವದ ಯಶಸ್ಸಿಗೆ ಸರ್ವರ ಸಹಕಾರ ಕೋರಿದರು. ಪ್ರಧಾನ ಕಾರ್ಯದರ್ಶಿ ರವಿ ಪೂಜಾರಿ ಚಿಲಿಂಬಿ, ಕಾರ್ಯದರ್ಶಿ ಸುಧಾಕರ ಸುವರ್ಣ, ಕೋಶಾಧಿಕಾರಿ ದೀಪಕ್ ಕೋಟ್ಯಾನ್, ಉತ್ಸವ ಸಮಿತಿಯ ಡಾ.ರಾಜಾರಾಂ, ಸತ್ಯಜಿತ್ ಸುರತ್ಕಲ್, ಮೋಹನದಾಸ್ ವಾಮಂಜೂರು ಉಪಸ್ಥಿತರಿದ್ದರು.