ಉಳ್ಳಾಲ: ನಿವೇಶನಕ್ಕೆ ಅರ್ಜಿ ಸಲ್ಲಿಸಲು ಗ್ರಾ.ಪಂ. ಗೆ ಆಗಮಿಸಿದ ಮಹಿಳೆಯೊಬ್ಬರಿಗೆ ಅಲ್ಲಿನ ಅಧ್ಯಕ್ಷರ ಕಛೇರಿಯಲ್ಲಿ ಪಂಚಾಯತ್ ನ ಹಿರಿಯ ಸದಸ್ಯ ಲೈಂಗಿಕ ಕಿರುಕುಳ ನೀಡಿರುವ ಬಗ್ಗೆ ಉಳ್ಳಾಲ ಠಾಣೆಯಲ್ಲಿ ಅ. 7 ರಂದು ಪ್ರಕರಣ ದಾಖಲಾಗಿದೆ.
ಘಟನೆಯೂ 20 ದಿನಗಳ ಹಿಂದೆ ನಡೆದಿದ್ದು, ಪ್ರಕರಣವೂ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟವಾಗುತ್ತಲೇ ಸಂತೃಸ್ತ ಮಹಿಳೆ ಠಾಣೆಗೆ ತೆರಳಿ ದೂರು ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಉಳ್ಳಾಲ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಮುನ್ನೂರು ಗ್ರಾ. ಪಂ ನಲ್ಲಿ ಸೆ. 18 ರಂದು ಘಟನೆ ನಡದಿರುವುದಾಗಿ ಸಂತೃಸ್ತ ಮಹಿಳೆ ಆರೋಪಿಸಿದ್ದಾರೆ. ಮಹಿಳೆಯ ದೂರಿನ ಮೇರೆಗೆ ಪಂಚಾಯತ್ ಸದಸ್ಯ ಬಾಬು ಶೆಟ್ಟಿ (75) ಎಂಬ ವರನ್ನು ಬಂಧಿಸಿದ್ದಾರೆ. ರಾಸಲೀಲೆಯ ದೃಶ್ಯವೂ ಅಧ್ಯಕ್ಷರ ಕೊಠಡಿಯಲ್ಲಿದ್ದ ಸಿಸಿ ಟಿವಿಯಲ್ಲಿ ದಾಖಲಾಗಿದ್ದು ಅದರ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಯನ್ನು ಆರೋಪಿ ಬಂಧಿಸಿದ್ದಾರೆ.
ಸೆ. ನ 18ರಂದು ಮಹಿಳೆ ಪಂಚಾಯತ್ ಕಚೇರಿಗೆ ಆಗಮಿಸಿ ಅಧ್ಯಕ್ಷರ ಕೊಠಡಿಗೆ ತೆರಳಿದ್ದಾರೆ. ಈ ಸಂದರ್ಭ ಅಧ್ಯಕ್ಷರು ಪಂಚಾಯತ್ ಅಭಿವೃದ್ಧಿ ಅಧಿಕಾರಿಯೊಂದಿಗೆ ಚರ್ಚೆಯಲ್ಲಿದ್ದು, ಅಧ್ಯಕ್ಷರ ಕೊಠಡಿಯಲ್ಲಿದ್ದ ಹಿರಿಯ ಸದಸ್ಯ ಮಹಿಳೆಗೆ ಕಿರುಕುಳ ನೀಡಿದ್ದಾರೆ. ಜತೆಗೆ ಬಂದಿದ್ದ ಮಕ್ಕಳಿಗೆ ಚಾಕಲೇಟ್ ಅಮೀಷವೊಡ್ಡಿ ಅವರನ್ನು ಹೊರಗೆ ಕಳುಹಿಸಿ ಕೃತ್ಯ ಎಸಗಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.