ಬಂಟ್ವಾಳ: ಮಹತೊಭಾರ ಶ್ರೀ ಕಾರಿಂಜೇಶ್ವರ ದೇವಸ್ಥಾನ ಕಾರಿಂಜ ಇದರ ವ್ಯವಸ್ಥಾಪನಾ ಸಮಿತಿಯ ನೂತನ ಅಧ್ಯಕ್ಷರಾಗಿ ಚಂದ್ರಶೇಖರ ಶೆಟ್ಟಿ ಪುಳಿಮಜಲು ಆಯ್ಕೆಯಾದರು.
ನೂತನ ಸಮಿತಿಯ ಸದಸ್ಯರಾಗಿ ಸೂರ್ಯಹಾಸ ಕೆ, ರಾಧಾಕೃಷ್ಣ ಕೆ., ರಾಘವೇಂದ್ರ ನಾಯ್ಕ, ಪ್ರವೀಣ್ ಪೂಜಾರಿ, ಆನಂದ, ಸುಮನಾ, ಮಾಲತಿ ಯು ಹಾಗೂ ಪ್ರಧಾನ ಅರ್ಚಕರು ಆಯ್ಕೆಗೊಂಡಿದ್ದಾರೆ.
ಕಾವಳಮೂಡುರು ಪುಳಿಮಜಲು ನಿವಾಸಿ ದಿ. ಸದಾಶಿವ ಶೆಟ್ಟಿ ಯವರ ಪುತ್ರನಾದ ಚಂದ್ರಶೇಖರ್ ಶೆಟ್ಟಿ ಯವರು ಖ್ಯಾತ ಉದ್ಯಮಿಗಳಾಗಿದ್ದಾರೆ.
ಕಾರಿಂಜೇಶ್ವರ ದೇವಸ್ಥಾನದ ಆಡಳಿತಾಧಿಕಾರಿಗಳಾದ ನೋಣಯ್ಯ ನಾಯ್ಕ್ ರವರು ಚಂದ್ರಶೇಖರ ಶೆಟ್ಟಿ ಯವರಿಗೆ ಅಧಿಕಾರಿ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ವ್ಯವಸ್ಥಾಪನ ಸಮಿತಿ ಸದಸ್ಯರು, ಕಚೇರಿಯ ಸಿಬ್ಬಂದಿಗಳು ಉಪಸ್ಥಿತರಿದ್ದರು.