ವಿಟ್ಲ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ರಿಜಿಸ್ಟರ್ ವಿಟ್ಲ ಹಾಗೂ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಮಂಚಿ ಇವುಗಳ ಜಂಟಿ ಆಶ್ರಯದಲ್ಲಿ ಮಾದರಿ ಹೈನುಗಾರಿಕೆ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ಕೊಟ್ಟಿಗೆ ರಚನೆ ಹಸುಗಳ ಆಯ್ಕೆ ಹಾಗೂ ಕರುಗಳ ನಿರ್ವಹಣೆ ಬಗ್ಗೆ ಸೂಕ್ತ ಮಾಹಿತಿ ಶಿಬಿರವು ಪ್ರಗತಿಪರ ಕೃಷಿಕ ನೂಜಿ ಗೋವಿಂದ ನಾಯಕ್ ರವರ ಮನೆಯಲ್ಲಿ ನಡೆಯಿತು.
ಪ್ರಗತಿಪರ ಕೃಷಿಕರು ಶಿಬಿರವನ್ನು ಉದ್ಘಾಟಿಸಿ ಹೈನುಗಾರಿಕೆ ಬಗ್ಗೆ ಸೂಕ್ತ ಮಾಹಿತಿ ನೀಡಿದರು. ನಂತರ ಸೇಲ್ಕೋ ಸೋಲಾರ ಇದರ ಮ್ಯಾನೇಜರ್ ರೋಷನ್ ರವರು ವಾಟರ್ ಹೀಟರ್, ಸೋಲಾರ್ ಲೈಟ್, ಸೋಲಾರ್ ಕುಲುಮೆ ಬಗ್ಗೆ ಸೂಕ್ತ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಒಕ್ಕೂಟದ ಅಧ್ಯಕ್ಷರಾದ ಸೀತಾರಾಮ ಯೋಜನೆಯ ಕೃಷಿ ಅಧಿಕಾರಿ ಚಿದಾನಂದ ಉಪಸ್ಥಿತರಿದ್ದರು. ಸೇವಾ ಪ್ರತಿನಿಧಿ ಚಂಚಲಾಕ್ಷಿ ಸ್ವಾಗತಿಸಿ, ಸುಧಾ ವಂದಿಸಿದರು. ಸೇವಾ ಪ್ರತಿನಿಧಿ ಸುನಿತಾ ಕಾರ್ಯಕ್ರಮ ನಿರೂಪಿಸಿದರು.