ಬೆಂಗಳೂರು: ಡ್ರೀಮ್ 11 ಆನ್ ಲೈನ್ ಗೇಮ್ ಆ್ಯಪ್ ವಿರುದ್ಧ ನಗರದ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಮಂಜುನಾಥ್ ಎಂಬುವವರು ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಎಫ್ಐಆರ್ ದಾಖಲಾಗಿದೆ. ಈ ಹಿಂದೆ ರಾಜ್ಯ ಸರ್ಕಾರ ಕೂಡ ಈ ಆನ್ ಲೈನ್ ಗೇಮ್ ಬ್ಯಾನ್ ಮಾಡಲು ಮುಂದಾಗಿತ್ತು. ಈ ಗೇಮ್ ಆ್ಯಪ್ ಮೂಲಕ ಕೋಟಿ ಕೋಟಿ ಗೆಲ್ಲಬಹುದು ಎಂದು ಆಸೆ ತೋರಿಸಲಾಗುತ್ತಿದೆ. ಇದರಿಂದ ಸಾವಿರಾರು ಜನ ಹಣವನ್ನ ರಿಸ್ಕ್ಗೆ ಇಟ್ಟು ನಷ್ಟ ಮಾಡಿಕೊಂಡಿದ್ದಾರೆ ಎಂದು ದೂರುದಾರರು ಆರೋಪಿಸಿದ್ದರು.
ಅದರಂತೆ ನೇರವಾಗಿ ಬೆಟ್ಟಿಂಗ್ಗೆ ಪ್ರಚೋದನೆ ಮಾಡುತ್ತಿರುವ ಆರೋಪಿದ ಮೇಲೆ ಕರ್ನಾಟಕ ಪೊಲೀಸ್ ಆ್ಯಕ್ಟ್-2021 ಪ್ರಕಾರ ಕೇಸ್ ದಾಖಲಿಸಿಕೊಳ್ಳಲಾಗಿದೆ. ಇದು ಸ್ಪೋರ್ಟಾ ಟೆಕ್ನಾಲಜಿ ಪ್ರೈವೇಟ್ ಲಿಮಿಟೆಡ್ ಸಂಸ್ಥೆಗೆ ಸೇರಿದ ಆ್ಯಪ್. ಅದರಂತೆ ಕಂಪನಿಯ ಭವಿತ್ ಸೇಟ್ ಹಾಗೂ ಹರೀಶ್ ಜೈನ್ ಎಂಬುವವರ ವಿರುದ್ಧ ಪ್ರಕರಣ ದಾಖಲಾಗಿದೆ. ಇವರಿಬ್ಬರು ಡ್ರೀಮ್-11 ಕಂಪನಿಯ ಸಂಸ್ಥಾಪಕರಾಗಿದ್ದಾರೆ.