ಪುತ್ತೂರು: ಅಭಿಮಾನದ ಧ್ವನಿ, ಅನ್ಯಾಯದ ವಿರುದ್ಧ ‘ರಾಜ’ ಧ್ವನಿ, ರೋಹಿಣಿ ಸಿಂಧೂರಿ ಪರವಾಗಿ ನಿಂತ ಪುತ್ತೂರಿನ ಸ್ವಾಗತ್ ಬೇಕರಿಯ ರಾಜು ರವರಿಗೆ ಉದ್ಯಮಿ ಜಯರಾಮ್ ರೈ ಅಬುದಾಬಿ, ಉದ್ಯಮಿ ಜಯಕುಮಾರ್ ರೈ, ಮಿತ್ರಂಪಾಡಿ ಚೆನ್ನಪ್ಪ ರೈ ಯವರ ಪುತ್ರರು ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, Zoom.intv ಯಲ್ಲಿ ದಕ್ಷ ಅಧಿಕಾರಿ ರೋಹಿಣಿ ಸಿಂಧೂರಿ ಅವರ ಬಗ್ಗೆ ಮಾತನಾಡುವುದನ್ನು ನೋಡಿ ನನಗೆ ತುಂಬಾ ಖುಷಿಯಾಯಿತು ಹಾಗೇ ಸನ್ಮಾನ ಕಾರ್ಯಕ್ರಮ ಮಾಡಬೇಕೆಂದು ಮನಸ್ಸಾಯಿತು ಎಂದು ಹೇಳಿದರು.
ದಕ್ಷ ಅಧಿಕಾರಿಗಳು ಯಾವ ಪ್ರಚಾರ ಪ್ರಿಯರು ಅಲ್ಲ, ಅವರು ಒಳ್ಳೆಯ ಕೆಲಸ ಮಾಡುವುದು ಯಾರಿಗೂ ಗೊತ್ತಾಗುವುದಿಲ್ಲ, ಅವರೊಂದು ತಪ್ಪು ಮಾಡಿದರು ನೂರು ಸಾರಿ ಹೇಳುತ್ತಾರೆ. ನಿಷ್ಠಾವಂತ ಅಧಿಕಾರಿಗಳಿಗೆಲ್ಲ ಅಭಿನಂದನೆಗಳು ಎಂದರು.