ಪುತ್ತೂರು: ಅಭಿಮಾನ್ ಕ್ರಿಕೆಟರ್ಸ್ ಹಾಗೂ ಫ್ರೆಂಡ್ಸ್ ಕಾರ್ಜಲ್ ನೇತೃತ್ವದಲ್ಲಿ ನಡೆದ ಕ್ರಿಕೆಟ್ ಪಂದ್ಯಾಕೂಟವು ಹಲವು ಬಗೆಯ ಆಕರ್ಷಣೆಗಳಿವೆ ಕಾರಣವಾಗಿದೆ. ಪಂದ್ಯಾಟವನ್ನು ಜ.10 ರಂದು ನಡೆಸಲು ತೀರ್ಮಾನಿಸಿದ್ದ ಸಂಘಟಕರಿಗೆ ಅಡ್ಡಿ ಎಂಬಂತೆ 9 ರಂದು ಸಾಯಂಕಾಲ ದಿಂದ ರಾತ್ರಿಯಿಡೀ ಸುರಿದ ಮಳೆ.
ಒಂದು ಪಂದ್ಯಾಟ ಏರ್ಪಡಿಸಲು ಅದು ಸುಸೂತ್ರವಾಗಿ ನಡೆಯಲು ಹಲವು ಜನರ ಪರಿಶ್ರಮ ಅದರಲ್ಲಿರುತ್ತದೆ. ಹಲವು ತಯಾರಿಗಳನ್ನು ತಿಂಗಳುಗಳ ಹಿಂದೆಯೇ ಮಾಡಬೇಕಾಗುತ್ತದೆ. ಹೀಗೆ ಕಾರ್ಜಲು ಯುವಕರ ಪರಿಶ್ರಮದಿಂದ ಆಯೋಜನೆ ಗೊಂಡ ಪಂದ್ಯವೇ ಕಾರ್ಜಾಲು ಪ್ರೀಮಿಯರ್ ಲೀಗ್ 2021.
ಕ್ರೀಡಾ ಪ್ರೇಮ : ಉತ್ಸಾಹ : ಕ್ರಿಕೆಟ್ ಮೇಲಿನ ಆಸಕ್ತಿ ಮೆರೆದ ಯುವಕರು
ಪಂದ್ಯಾಟದ ಮುಂಚಿನ ದಿನ ರಾತ್ರಿ ಧಾರಾಕಾರ ಮಳೆ ಸುರಿದು ಬೆಳಗ್ಗೆ ಮೈದಾನ ಇಡೀ ನೀರಿನಿಂದ ತುಂಬಿ ಹೋಗಿತ್ತು ಇಲ್ಲಿ ಕ್ರಿಕೆಟ್ ಆಡುವುದು ಅವತ್ತಿನ ಮಟ್ಟಿಗೆ ಅಸಾದ್ಯ ಎಂಬ ಭಾವನೆ ಎಲ್ಲರಲ್ಲೂ ಮನೆಮಾಡಿತ್ತು ಆದರೆ ಯುವಕರ ತಂಡ ಸತತ 2 ಗಂಟೆಗಳ ಕಾಲ ನೀರನ್ನು ತೆಗೆದು ಸತತ ಪರಿಶ್ರಮದಿಂದ ಕೇವಲ 2 ಗಂಟೆಗಳಲ್ಲಿ ಮೈದಾನವನ್ನು ಮತ್ತೆ ಸಿದ್ಧಪಡಿಸುವಲ್ಲಿ ಯಶಸ್ವಿಯಾಗಿತ್ತು. ಅಲ್ಲಿನ ಯುವಕರ ಶ್ರಮ, ಕ್ರೀಡಾ ಆಸಕ್ತಿ , ಕ್ರೀಡಾ ಪ್ರೇಮ ಈಗ ಎಲ್ಲೆಡೆ ಪ್ರಶಂಶೆಗೆ ಪಾತ್ರವಾಗಿದೆ.