ಪುತ್ತೂರು: ಯುವ ಕಾಂಗ್ರೆಸ್ ಪುತ್ತೂರು ಬ್ಲಾಕ್ ಸಮಿತಿಗೆ ಒಳಪಟ್ಟ ಪುತ್ತೂರು ನಗರ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಮೋನು ಬಪ್ಪಳಿಗೆ, ಉಪಾಧ್ಯಕ್ಷರಾಗಿ ಅಖಿಲ್, ಕಾರ್ಯದರ್ಶಿಯಾಗಿ ಸಂದೀಪ್ ಪಾಯಸ್ ಹಾಗೂ ತವೇದ್ ಸಾಲ್ಮರ ಆಯ್ಕೆಯಾಗಿದ್ದಾರೆ.
ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿರುವ ಮೋನು ಬಪ್ಪಳಿಗೆ ಅವರು ಹಲವಾರು ವರ್ಷಗಳಿಂದ ಪಕ್ಷದಲ್ಲಿ ಸಕ್ರಿಯರಾಗಿದ್ದು, ಪಕ್ಷಕ್ಕಾಗಿ ಹಲವಾರು ಚುನಾವಣೆಯಲ್ಲಿ ಕೆಲಸ ಮಾಡಿದ್ದಾರೆ.
. ಪಕ್ಷಕ್ಕೆ ಇವರು ಮಾಡಿದ ಸೇವೆಯನ್ನು ಪರಿಗಣಿಸಿ, ನಗರ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ನೇಮಕಗೊಳಿಸಿ ಜಿಲ್ಲಾಧ್ಯಕ್ಷ ಲುಕ್ಮಾನ್ ಬಂಟ್ವಾಳ ಆದೇಶಿಸಿದ್ದಾರೆ.