ವಿಟ್ಲ: ಮಾಮೇಶ್ವರ ಶ್ರೀ ಉಮಾಮಹೇಶ್ವರ ದೇವಸ್ಥಾನದ ವಠಾರದಲ್ಲಿ ‘ಬಾಲಗೋಕುಲ ಮತ್ತು ಧರ್ಮಜಾಗೃತಿ ಘಟಕದ ಪ್ರಾರಂಭೋತ್ಸವವು’ ಅ.15 ರಂದು ನಡೆಯಲಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉದಯ್ ಕುಮಾರ್ ನಾಯ್ತೋಟ್ಟು ರವರು ವಹಿಸಲಿದ್ದಾರೆ. ದೀಪ ಪ್ರಜ್ವಲನೆಯನ್ನು ಮೂರುಕಜೆ ಮೈತ್ರೇಯಿ ಗುರುಕುಲಂ ಮೇಲ್ವಿಚಾರಕರಾದ ಜಗನ್ನಾಥ ಕಾಸರಗೋಡು ನೆರವೇರಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಶಿವಕಲಾ ನಾಯ್ತೋಟ್ಟು, ವನಿತಾ ಮಾಮೇಶ್ವರ, ತೇಜಸ್ವಿನಿ ಮಾಮೇಶ್ವರ ಭಾಗವಹಿಸಲಿದ್ದಾರೆ.
ಧರ್ಮ ಜಾಗೃತಿ ಮಾಮೇಶ್ವರ ಘಟಕ ಘೋಷಣೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಟ್ಲ ಅರಮನೆ ಕೃಷ್ಣಯ್ಯ ಬಲ್ಲಾಳ್, ದಿಕ್ಸುಚಿ ಭಾಷಣವನ್ನು ಪುತ್ತೂರು ಜಿಲ್ಲೆಯ ಧರ್ಮ ಪ್ರಸಾರ ವಿಭಾಗ ಜಿಲ್ಲಾ ಪ್ರಮುಖ್ ಶ್ರೀಕೃಷ್ಣ ಉಪಾಧ್ಯಾಯ ಮಾಡಲಿದ್ದಾರೆ. ಮುಖ್ಯ ಅತಿಥಿಯಾಗಿ ಸೀತಾರಾಮ ಪಕ್ಕಲ ನಚ್ಚಪಾಲ್ ಆಗಮಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.