ಭಾರತೀಯ ಅಂಚೆ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸಲಿಚ್ಛಿಸುವ ಉದ್ಯೋಗಕಾಂಕ್ಷಿಗಳಿಗೆ ಸುವರ್ಣಾವಕಾಶವನ್ನು ಅಂಚೆ ಇಲಾಖೆ ಕಲ್ಪಿಸಿಕೊಟ್ಟಿದೆ. ಭಾರತೀಯ ಅಂಚೆ ಇಲಾಖೆ(Indian Postal Service) ಕ್ರೀಡಾ ಕೋಟಾದಡಿ ಅಂಚೆ ಸಹಾಯಕ, ಪೋಸ್ಟ್‌ಮ್ಯಾನ್(Postman) ಮತ್ತು ಮಲ್ಟಿ-ಟಾಸ್ಕಿಂಗ್ ಸ್ಟಾಫ್‌ನ ಅನೇಕ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.
ಕ್ರೀಡೆಗಳಾದ ಕ್ರಿಕೆಟ್, ಸೈಕ್ಲಿಂಗ್, ಶೂಟಿಂಗ್, ಟೆನ್ನಿಸ್, ಕಬಡ್ಡಿ, ವಾಲಿಬಾಲ್, ಚೆಸ್, ಹಾಕಿ ಮುಂತಾದವುಗಳಲ್ಲಿ ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆಗೈದ ಅಭ್ಯರ್ಥಿಗಳು ಪ್ರಯತ್ನಸಬಹುದಾಗಿದೆ.
ಹುದ್ದೆಯ ವಿವರಗಳು:
- ಅಂಚೆ ಸಹಾಯಕ – 72 ಹುದ್ದೆಗಳು
- ಪೋಸ್ಟ್‌ಮ್ಯಾನ್ – 90 ಪೋಸ್ಟ್‌ಗಳು
- ಮಲ್ಟಿ ಟಾಸ್ಕಿಂಗ್ ಸ್ಟಾಫ್-59 ಹುದ್ದೆಗಳು
ವಿದ್ಯಾರ್ಹತೆ:
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಟ 60% ಅಂಕಗಳೊಂದಿಗೆ ಇನ್ಸ್ಟಿಟ್ಯೂಟ್ ಆಫ್ ಕಾಸ್ಟ್ ಅಕೌಂಟೆಂಟ್ಸ್ ಆಫ್ ಇಂಡಿಯಾ (ICAI) ನಡೆಸಿದ CMA ಮಧ್ಯಂತರ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.
ಅಭ್ಯರ್ಥಿಗಳು ಶೈಕ್ಷಣಿಕವಾಗಿ ಪಿಯುಸಿ ಜೊತೆಗೆ ಕಂಪ್ಯೂಟರ್ ಜ್ಞಾನ ಹೊಂದಿರಬೇಕಾಗಿದ್ದು, ಆನ್ಲೈನ್ ಅರ್ಜಿ ಸಲ್ಲಿಸಲು ನ.12 ಕೊನೆಯ ದಿನವಾಗಿದೆ.
ಹೆಚ್ಚಿನ ಮಾಹಿತಿಗಾಗಿ ಇಲಾಖೆಯ ವೆಬ್ಸೈಟ್ https://www.indiapost.gov.in/vas/Pages/IndiaPostHome.aspx ನ್ನು ವೀಕ್ಷಿಸಬಹುದಾಗಿದೆ.