ಪುತ್ತೂರು: ಒಕ್ಕಲಿಗ ಗೌಡ ಸೇವಾ ಸಂಘ ಪುತ್ತೂರು ಇದರ ಪ್ರಾಯೋಜಕತ್ವದ ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ 7ನೇ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಭಾ ಭವನದ ಕಟ್ಟಡದಲ್ಲಿ ಅ.10 ರಂದು ಉದ್ಘಾಟನೆಗೊಳ್ಳಲಿದೆ.
2002 ರಲ್ಲಿ ಪ್ರಾರಂಭಗೊಂಡ ಸಹಕಾರ ಸಂಘವು ಈಗಾಗಲೇ ಪುತ್ತೂರು, ಕಡಬ, ಉಪ್ಪಿನಂಗಡಿ, ನೆಲ್ಯಾಡಿ, ಕುಂಬ್ರ ಮತ್ತು ಅಲಂಕಾರು ಶಾಖೆಗಳನ್ನು ಹೊಂದಿದ್ದು, ಪುತ್ತೂರು ಎಪಿಎಂಸಿ ರಸ್ತೆಯ ಮಣಾಯಿ ಆರ್ಚ್ ಸಂಕೀರ್ಣದ ಸ್ವಂತ ಕಟ್ಟಡದಲ್ಲಿ ಕೇಂದ್ರ ಕಚೇರಿಯನ್ನು ಹೊಂದಿದೆ.
ಸುಮಾರು 4661ಕ್ಕೂ ಮಿಕ್ಕಿ ಸದಸ್ಯರನ್ನು ಹೊಂದಿರುವ ಸಂಘ ಕಳೆದ ವಾರ್ಷಿಕ ಅವಧಿಯಲ್ಲಿ 2.36 ಕೋಟಿಗಿಂತಲೂ ಅಧಿಕ ವ್ಯವಹಾರ ಮಾಡಿ ರೂ.71 ಲಕ್ಷಕ್ಕಿಂತ ಅಧಿಕ ಲಾಭಾಂಶವನ್ನು ಪಡೆದುಕೊಂಡು ಶೇ.12 ಡಿವಿಡೆಂಟ್ ನೀಡಲಾಗಿದೆ.
ಇದೀಗ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಭಾಭವನದ ಕಟ್ಟಡದಲ್ಲಿರುವ ವಿಸ್ತತ ಕಚೇರಿಯನ್ನು ಪೂರ್ಣ ಪ್ರಮಾಣದ ಶಾಖೆಯಾಗಿ ಮತ್ತು ತಾಲೂಕಿನ 7ನೇ ಶಾಖೆಯಾಗಿ ಮೂಡಿ ಬರಲಿದೆ.
ನೂತನ ಶಾಖೆಯನ್ನು ಶಾಸಕ ಸಂಜೀವ ಮಠಂದೂರು ಉದ್ಘಾಟಿಸಲಿದ್ದಾರೆ. ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ, ನಗರಸಭಾ ಸ್ಥಳೀಯ ಸದಸ್ಯ ಪಿ.ಜಿ. ಜಗನ್ನಿವಾಸ್ ರಾವ್, ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ಹೆಚ್.ಡಿ. ಶಿವರಾಮ ರವರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಸಂಘದ ಪ್ರಕಟಣೆ ತಿಳಿಸಿದೆ.