ಬಂಟ್ವಾಳ: ಅಪ್ರಾಪ್ತ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ನಡೆದಿದೆ. ಸಂತ್ರಸ್ತ ಅಪ್ರಾಪ್ತೆಯನ್ನು ಮಂಗಳೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಕಾಪು ನಿವಾಸಿ ಶರತ್ ಶೆಟ್ಟಿ, ಮಾರುತಿ ಮಂಜುನಾಥ್, ಲಾಡ್ಜ್ ಸತೀಶ್ ಹಾಗೂ ಇದಾಯತ್ತುಲ್ಲ ಎಂದು ಗುರುತಿಸಲಾಗಿದೆ.
ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಕೆ. ಎಸ್ ಶರತ್ ಶೆಟ್ಟಿ ಎಂಬ ಆರೋಪಿ ಬಾಲಕಿಯೊಂದಿಗೆ ಫೇಸ್ಬುಕ್ ನಲ್ಲಿ ಪರಿಚಯವಾಗಿ ಮೊಬೈಲ್ ನಲ್ಲಿ ಮಾತನಾಡುತ್ತಿದ್ದ ಆರೋಪಿ ಶರತ್ ಶೆಟ್ಟಿ ತನ್ನ ಸಂಬಂಧಿ ಮಾರುತಿ ಮಂಜುನಾಥ್ ಗೆ ಪರಿಚಯ ಮಾಡಿಸಿದ್ದು, ಆರೋಪಿ ಮಂಜುನಾಥ್ ಬಾಲಕಿಯೊಂದಿಗೆ ಸಲುಗೆಯಿಂದ ಇದ್ದು ವಾಟ್ಸ್ಆಪ್ ನಲ್ಲಿ ಅಶ್ಲೀಲ ವಿಡಿಯೋ ಚಾಟ್ ಮಾಡಿದ್ದ.
ಅ.8 ರಂದು ಆರೋಪಿ ಶರತ್ ಶೆಟ್ಟಿ ಬಾಲಕಿ ಮಂಗಳೂರಿಗೆ ಬರುವಂತೆ ತಿಳಿಸಿದ್ದು, ಬಾಲಕಿ ಬಸ್ ನಲ್ಲಿ ಮಂಗಳೂರಿಗೆ ತೆರಳಿ ಆರೋಪಿ ಶರತ್ ಶೆಟ್ಟಿ ಯನ್ನು ಭೇಟಿಯಾಗಿ ಬಾಲಕಿಯನ್ನು ಲಾಡ್ಜ್ ನಲ್ಲಿ ವಿಶ್ರಾಂತಿ ಮಾಡೋಣ ಎಂದು ಪುಸಲಾಯಿಸಿ ಮಂಗಳೂರಿನ ಲಾಡ್ಜ್ ಒಂದಕ್ಕೆ ಕರೆದು ಕೊಂಡು ಹೋಗಿ ಬಾಲಕಿಯನ್ನು ಅತ್ಯಾಚಾರ ಮಾಡಿದ್ದು ಅಷ್ಟೇ ಅಲ್ಲದೇ ನಂತರ ತನ್ನ ಸ್ನೇಹಿತ ಇದಾಯತ್ತುಲ್ಲ ನಿಗೆ ಒಂದು ಹುಡುಗಿ ಇದೆ ಲಾಡ್ಜ್ ಗೆ ಬರುವಂತೆ ತಿಳಿಸಿದ್ದು ಆರೋಪಿ ಇದಾಯತ್ತುಲ್ಲ ಲಾಡ್ಜ್ ಗೆ ತೆರಳಿ ಬಾಲಕಿಯ ಮೇಲೆ ಅತ್ಯಾಚಾರ ಮಾಡಿದ್ದಾನೆ.
ಆರೋಪಿ ಸತೀಶ್ ಆರೋಪಿಗಳು ಅತ್ಯಾಚಾರ ಏಸಗಲು ಲಾಡ್ಜ್ ಅವಕಾಶ ಮಾಡಿಕೊಟ್ಟಿದ್ದಲ್ಲದೇ ಬಾಲಕಿ ತಂಗಿದ್ದ ರೂಂಗೆ ತೆರಳಿ ಬಾಲಕಿಯ ಖಾಸಗಿ ಅಂಗಗಳನ್ನು ಮುಟ್ಟಿ ಲೈಂಗಿಕ ಶೋಷಣೆ ನೀಡಿದ್ದು, ನಂತರ ಬಾಲಕಿ ಬಸ್ ಮೂಲಕ ಬಂಟ್ವಾಳಕ್ಕೆ ಬಂದಿದ್ದಾಳೆ ಎಂದು ತನಿಖೆ ವೇಳೆ ತಿಳಿದು ಬಂದಿದೆ.
ಬಾಲಕಿ ಮೇಲೆ ಅತ್ಯಾಚಾರ ವೆಸಗಿದ ಆರೋಪದ ಮೇಲೆ ಆರೋಪಿಗಳಾದ ಆರೋಪಿಗಳಾದ ಕಾಪು ನಿವಾಸಿ ಕೆ. ಎಸ್ ಶರತ್ ಶೆಟ್ಟಿ, ಮಾರುತಿ ಮಂಜುನಾಥ್, ಲಾಡ್ಜ್ ಸತೀಶ್, ಹಾಗೂ ಇದಾಯತ್ತುಲ್ಲ ರನ್ನು ಬಂಧಿಸಿದ್ದು, ತನಿಖೆ ಮುಂದುವರೆದಿದೆ.
ಈ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಅ.ಕ್ರ 116/2021 ಕಲಂ: 366 (a), 376(D), 506 ಐಪಿಸಿ ಮತ್ತು ಕಲಂ: 04, 06 POCSO ಕಾಯ್ದೆ ಯಂತೆ ಪ್ರಕರಣ ದಾಖಲಾಗಿದೆ.