ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಸನ್ನಿಧಿಯಲ್ಲಿ ವರ್ಷಕ್ಕೆ ಒಮ್ಮೆಯಂತೆ ಮಕರಸಂಕ್ರಮಣದ ಪರ್ವದಿನದಂದು ‘ಉಳ್ಳಾಲ್ತಿ ಅಮ್ಮನವರ ನಡೆ’ ಯಲ್ಲಿ ನಡೆಯುವ ಕನಕಾಭಿಷೇಕವು ಜ.14ರಂದು ರಾತ್ರಿ ವೈಭವದಿಂದ ನಡೆಯಿತು.ಶ್ರೀ ದೇವರ ರಾತ್ರಿ ಪೂಜೆಯ ಬಳಿಕ ಬಲಿ ಉತ್ಸವದಲ್ಲಿ ತಂತ್ರಸುತ್ತು, ಉಡುಕೆ, ಚೆಂಡೆ, ವಾದ್ಯ ಸುತ್ತುಗಳು ಜರಗಿ ಸರ್ವವಾದ್ಯಸುತ್ತಿನ ಕೊನೆಯಲ್ಲಿ ಉಳ್ಳಾಲ್ತಿ ಅಮ್ಮನವರ ನಡೆಯಲ್ಲಿ ಕನಕಾಭಿಷೇಕ ನಡೆಯಿತು.ದೇವಳದ ಆಡಳಿತಾಧಿಕಾರಿ ಯತೀಶ್ ಉಳ್ಳಾಲ್ ಅವರು ದೇವರ ಉತ್ಸವ ಮೂರ್ತಿಗೆ ಕನಕಾಭಿಷೇಕ ಚಿಮ್ಮಿಸಿದರು. ಬಳಿಕ ವಸಂತ ಕಟ್ಟೆಯಲ್ಲಿ ಭಕ್ತರಿಗೆ ಕನಕಾಭಿಷೇಕದ ಪ್ರಸಾದ ವಿತರಣೆ ಮಾಡಲಾಯಿತು.