ಪುತ್ತೂರು: ನವರಾತ್ರಿ ಹಬ್ಬದ ಪ್ರಯುಕ್ತ ಹೆಚ್ಚಾಗಿ ಎಲ್ಲಾ ಹೆಣ್ಣು ಮಕ್ಕಳು ದೇವಿಯ ವೇಷಭೂಷಣವನ್ನು ತೊಟ್ಟು ತಮ್ಮ ಫೋಟೋ ತೆಗಿಸಿಕೊಳ್ಳುತ್ತಿದ್ದು, ಕರಾವಳಿಯಾದ್ಯಂತ ವೈರಲ್ ಆಗುತ್ತಿದೆ..
ಅದೇ ರೀತಿ ಪುತ್ತೂರು ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷರಾದ ಬಿಜೆಪಿ ಮುಖಂಡ, ನಿಡ್ಪಳ್ಳಿ ಗ್ರಾಮದ ಕತ್ತಲಕಾನ ನಿವಾಸಿ ಕೆ.ರಾಧಾಕೃಷ್ಣ ಬೋರ್ಕರ್ ರವರ ಪತ್ನಿ ಜ್ಯೋತಿಯವರು ನವರಾತ್ರಿ ಉತ್ಸವದ ಪ್ರಯುಕ್ತ ಲಕ್ಷ್ಮೀ ದೇವಿಯ ವೇಷ ಧರಿಸಿ ಫೋಸ್ ನೀಡಿರುವ ಫೊಟೋ ಮತ್ತು ವೀಡಿಯೋ ಎಲ್ಲರ ಗಮನ ಸೆಳೆಯುತ್ತಿದ್ದು, ಲಕ್ಷ್ಮೀ ದೇವಿಯೇ ಮುಗುಳು ನಗೆ ಬೀರುತ್ತಾ ಕುಳಿತ ಹಾಗೇ ಕಾಣುತ್ತಿದೆ..