ವಿಟ್ಲ: ನೆತ್ತೆರ್ ಕೆರೆ ನಿವಾಸಿ ನಿಶ್ಮಿತಾ ಕೆಲ ದಿನಗಳ ಹಿಂದೆ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು, ನಿಶ್ಮಿತಾ ಆತ್ಮಹತ್ಯೆ ಹಿಂದೆ ಕೆಲವರ ಕೈವಾಡ ಇದೆ ಎಂದು ಅವರ ಕುಟುಂಬದವರು ದಕ್ಷಿಣ ಕನ್ನಡ ಜಿಲ್ಲಾ ಮರಾಟಿ ಸಂರಕ್ಷಣಾ ಸಮಿತಿಗೆ ಮನವಿ ಕೊಟ್ಟ ಹಿನ್ನಲೆಯಲ್ಲಿ ಅ.13 ರಂದು ಅವಳ ಮನೆಗೆ ಭೇಟಿ ನೀಡಿದರು.
ಮನೆಗೆ ತೆರಳಿದ ಮರಾಟಿ ಸಂರಕ್ಷಣಾ ಸಮಿತಿಯವರು ಅವಳ ತಾಯಿ ಮತ್ತು ಮಾವನಲ್ಲಿ ವಿವರ ಪಡೆದುಕೊಂಡು ನಂತರ ಅವಳು ಕೆಲಸ ಮಾಡುತ್ತಿದ್ದ ಸ್ಥಳ ಪರಿಶೀಲನೆ ಮಾಡಿ ವಿಟ್ಲ ಠಾಣಾಧಿಕಾರಿ ಯವರಲ್ಲಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಿಷ್ಪಕ್ಷಪಾತವಾದ ತನಿಖೆ ನಡೆಸಿ ನೊಂದ ಕಟುಂಬಕ್ಕೆ ನ್ಯಾಯ ಒದಗಿಸಿ ಕೊಡಬೇಕೆಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ಠಾಣಾಧಿಕಾರಿಗಳು ಸಕರಾತ್ಮಕವಾಗಿ ಸ್ಪಂದಿಸಿದರು.