ಕಡಬ: ಕಳೆದ 10 ವರ್ಷಗಳಿಂದ ಕಡಬದ ಕಾಲೇಜು ರಸ್ತೆಯಲ್ಲಿ ದುರಸ್ಥಿ ಸೇವೆಯನ್ನು ಯಶಸ್ವಿಯಾಗಿ ಮಾಡುತ್ತಿದ್ದ ‘ಜಯ ರೆಫ್ರಿಜರೇಶನ್’ ಪ್ರಸ್ತುತ 11ನೇ ವರ್ಷಕ್ಕೆ ಪಾದಾರ್ಪಣೆ ಮಾಡುವ ಶುಭ ಸಂದರ್ಭದಲ್ಲಿ ದುರಸ್ಥಿ ಸೇವೆಯ ಜೊತೆಗೆ ಮಾರಾಟ ಸೇವೆಯನ್ನು ಆರಂಭಿಸಿದ್ದು, ಉದ್ಘಾಟನೆ ಅ.14 ರಂದು ನಡೆಯಿತು.
ಮಾಲಕರ ತಂದೆ, ತಾಯಿಯರಾದ ವೆಂಕಪ್ಪ ನಾಯ್ಕ ಮತ್ತು ಪಾರ್ವತಿ ದೀಪ ಬೆಳಗಿಸಿ ಉದ್ಘಾಟಿಸಿದರು. ಎಲ್ಲಾ ಕಂಪನಿಗಳ ಎಲೆಕ್ಟ್ರಿನಿಕ್ ವಸ್ತುಗಳು, ವಾಷಿಂಗ್ ಮೆಷಿನ್, ರೆಪ್ರಿಜರೇಶನ್, ಕೂಲರ್, ಫ್ಯಾನ್ ಹಾಗೂ ಎಲ್ಲಾ ರೀತಿಯ ಬಿಡಿ ಭಾಗಗಳು ದೊರೆಯುತ್ತದೆ ಮತ್ತು ಎಲ್ಲಾ ರೀತಿಯ ದುರಸ್ಥಿ ಕಾರ್ಯವನ್ನು ಮಾಡಿಕೊಡಲಾಗುವುದು, ಗ್ರಾಹಕರು ಸಹಕರಿಸುವಂತೆ ಮಾಲಕರು ತಿಳಿಸಿದರು.
ಈ ಸಂದರ್ಭದಲ್ಲಿ ಮಾಲಕರ ಸಹೋದರರಾದ ಈಶ್ವರ ನಾಯ್ಕ, ಉಮೇಶ್ ನಾಯ್ಕ ಸಾಜ, ಅನುರಾಧ ಸಾಜ, ಮಾಲಕರ ಪತ್ನಿ ಮತ್ತು ಮಕ್ಕಳು ಹಾಗೂ ಸಿಬ್ಬಂದಿಗಳು ಹಾಗೂ ಗ್ರಾಹಕರು ಉಪಸ್ಥಿತರಿದ್ದರು.































