ಪುತ್ತೂರು: ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆಯನ್ನು ಬಿಟ್ಟು ಪೊದೆಗೆ ಡಿಕ್ಕಿ ಹೊಡೆದು ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಮಗು ಸಹಿತ ಐವರು ಗಾಯಗೊಂಡ ಘಟನೆ ಕಡಬ ತಾಲೂಕಿನ ಕಾಣಿಯೂರಿನ ಬೆಳಂದೂರು ಎಂಬಲ್ಲಿ ಅ.15 ರಂದು ನಡೆದಿದೆ.
ನಾರಾಯಣ ಕೆ ಎಂಬವರ ಮಾಲಕತ್ವದ ಬೆಂಗಳೂರು ರಿಜಿಸ್ಟ್ರೇಷನ್ ನ ಮಾರುತಿ ಸಿಯಾಜ್ ಕಾರು ಅಪಘಾತಕ್ಕೀಡಾಗಿದ್ದು, ಗಾಯಾಳುಗಳ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್ ರವರ ಹತ್ತಿರದ ಸಂಬಂಧಿಕರು ಎನ್ನಲಾಗಿದೆ.
ಕಾರಿನಲ್ಲಿ ಒಟ್ಟು 5 ಜನ ಪ್ರಯಾಣಿಸುತ್ತಿದ್ದು, ಅವರು ಬೆಂಗಳೂರಿನ ಜೆಪಿ ನಗರ ನಿವಾಸಿಗಳು. ಕಾರಿನಲ್ಲಿ ಓರ್ವ ಮಹಿಳೆ, ಒಂದು ಮಗು, ಒಬ್ಬರು ವೃದ್ದರು ಹಾಗೂ ಇಬ್ಬರು ಪುರುಷರಿದ್ದರು ಎಂದು ತಿಳಿದು ಬಂದಿದೆ.
ಅಪಘಾತದಿಂದ ಐವರಿಗೂ ಗಾಯಗಳಾಗಿದ್ದು, ವೃದ್ದರೋರ್ವರ ಸ್ಥಿತಿ ಗಂಭೀರವಾಗಿದೆ. ಬೆಳ್ಳಾರೆ ಠಾಣಾ ವ್ಯಾಪ್ತಿಯಲ್ಲಿ ಈ ಅಪಘಾತದ ನಡೆದಿದೆ.





























