ಪುತ್ತೂರು: ದೇಶ ಮತ್ತು ರಾಜ್ಯವನ್ನು ಆಳಿರುವ ಕಾಂಗ್ರೆಸ್ ಸರಕಾರಗಳು ಕಾರ್ಮಿಕರ ಕಲ್ಯಾಣಕ್ಕಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿರುತ್ತದೆ ಕೇಂದ್ರದಲ್ಲಿ ಕಾರ್ಮಿಕ ಇಲಾಖೆಯ ಮಂತ್ರಿಗಳಾಗಿದ್ದ ದಿವಂಗತ ಆಸ್ಕರ್ ಫೆರ್ನಾಂಡಿಸ್ ಹಾಗೂ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಯವರ ಅಧಿಕಾರವಧಿಯಲ್ಲಿ ಕಾರ್ಮಿಕರ ಅನುಕೂಲಕ್ಕಾಗಿ ಕಾರ್ಮಿಕರಿಗೆ ಕಾರ್ಡ್, ಇನ್ಸೂರೆನ್ಸ್, ಕಾರ್ಮಿಕರ ಮಕ್ಕಳಿಗೆ ವಿದ್ಯಾರ್ಥಿ ವೇತನ ಯೋಜನೆ , ಮೊದಲಾದ ಹೊಸ ಯೋಜನೆಗಳನ್ನು ಘೋಷಣೆ ಮಾಡಿದ್ದರು. ಇದು ಕಾರ್ಮಿಕರ ಶ್ರೇಯೋಭಿವೃದ್ಧಿಗೆ ಮುಖ್ಯ ಕಾರಣವಾಗಿರುತ್ತದೆ. ಸರಕಾರ ತಂದಿದ್ದ ಕಲ್ಯಾಣ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸುವಲ್ಲಿ ಕಾಂಗ್ರೆಸ್ ನಲ್ಲಿರುವ ಕಾರ್ಮಿಕ ಸಂಘಟನೆಗಳು ವಿಫಲವಾಗಿರುವ ಕಾರಣ ಕಾಂಗ್ರೆಸ್ ಸರಕಾರ ತಂದಿರುವ ಕಾರ್ಯಕ್ರಮ ಗಳನ್ನು ಬೇರೆ ಪಕ್ಷದ ಕಾರ್ಮಿಕ ಸಂಘಟಣೆಗಳು ಇದು ತಮ್ಮ ಕಾರ್ಯಕ್ರಮವೆಂದು ಬಿಂಬಿಸುವ ಕೆಲಸ ಮಾಡುತ್ತಿದೆ ಎಂದು ಹೇಳಿದರು.
ಕಾಂಗ್ರೆಸ್ ನ ಈ ಎಲ್ಲಾ ಕಾರ್ಮಿಕ ಕಲ್ಯಾಣ ಯೋಜನೆಯನ್ನು ಜನರಿಗೆ ತಲುಪಿಸುವಲ್ಲಿ ಕಾರ್ಮಿಕ ಘಟಕವು ಹೆಚ್ಚಿನ ಕೆಲಸ ಮಾಡಬೇಕಾಗಿದೆ. ಇದಕ್ಕಾಗಿ ಕಾರ್ಮಿಕ ಘಟಕವನ್ನು ಗಟ್ಟಿ ಗೊಳಿಸುವಲ್ಲಿ ಜಿಲ್ಲಾ ಕಾರ್ಮಿಕ ಘಟಕ ಕಾರ್ಯ ಯೋಜನೆ ಹಾಕಿಕೊಂಡಿದೆ. ಇದರೊಂದಿಗೆ ಕಾಂಗ್ರೆಸ್ ನಡೆ ಶ್ರಮಿಕರ ಕಡೆ ಎಂಬ ಕಾರ್ಯಕ್ರಮವನ್ನು ಆಯೋಜನೆ ಮಾಡಿ ಪುತ್ತೂರಿನಲ್ಲಿ ಈ ಕಾರ್ಯಕ್ರಮಕ್ಕೆ ಇಂದು ಚಾಲನೆ ನೀಡಲಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಕಾರ್ಮಿಕ ಘಟಕದ ಅಧ್ಯಕ್ಷ ಲಾರೆನ್ಸ್ ಡಿ ಸೋಜ ಹೇಳಿದರು. ಅವರು ಪುತ್ತೂರು ಬ್ಲಾಕ್ ಕಾಂಗ್ರೆಸ್ ಕಾರ್ಮಿಕ ಘಟಕದ ಅಧ್ಯಕ್ಷರಾದ ಶರೊನ್ ಸಿಕ್ವೇರ ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಹಾಗೂ ಜಿಲ್ಲಾ ಕಾರ್ಯಕ್ರಮವಾದ ಕಾಂಗ್ರೆಸ್ ನಡೆ ಶ್ರಮಿಕರ ಕಡೆ ಎಂಬ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಶಾಸಕಿ ಶಕುಂತಲಾ ಟಿ ಶೆಟ್ಟಿ ಪುತ್ತೂರಿನಲ್ಲಿ ಬ್ಲಾಕ್ ಗೆ ಸಂಬಂಧಪಟ್ಟ ಎಲ್ಲಾ ಮುಂಚೂಣಿ ಘಟಕಗಳನ್ನು ರಚನೆ ಮಾಡಿ ಘಟಕವನ್ನು ಕ್ರಿಯಾಶೀಲಗೊಳಿಸುವಂತಹ ಕೆಲಸವನ್ನು ಬ್ಲಾಕ್ ನ ಅಧ್ಯಕ್ಷ ಎಂಬಿ ವಿಶ್ವನಾಥ ರೈ ಯವರು ಮಾಡುತ್ತಿದ್ದಾರೆ ಮುಂದಿನ ದಿನಗಳಲ್ಲಿ ಬ್ಲಾಕ್ ಕಾರ್ಮಿಕ ಘಟಕದಿಂದ ಕಾರ್ಮಿಕ ಇಲಾಖೆಯ ಎಲ್ಲಾ ಯೋಜನೆಗಳ ಬಗ್ಗೆ ಜನರಿಗೆ ತಿಳಿಸುವ ಕೆಲಸವಾಗಲಿದೆ ಎಂದು ಹೇಳಿದರು. ಕಾರ್ಮಿಕರಿಗೆ ಸಿಗಬೇಕಾದಂತಹ ಆಹಾರ ಕಿಟ್ ಗಳನ್ನು ಸರಿಯಾದ ಫಲಾನುಭವಿಗಳಿಗೆ ನೀಡದೆ ವಂಚಿಸುವ ಕೆಲಸವನ್ನು ಬಿಜೆಪಿ ಯವರು ಮಾಡಿರುತ್ತಾರೆ ಕಾರ್ಮಿಕ ಇಲಾಖೆ ನೀಡುವ ಆಹಾರ ಕಿಟ್ ನಲ್ಲೂ ಕೂಡ ವ್ಯಾಪಕ ಭ್ರಷ್ಟಾಚಾರ ನಡೆದಿದೆ ಎಂಬ ಗುಮಾನಿ ಇದೆ ಬಿಜೆಪಿಯವರ ಇಂತಹ ಕಾರ್ಮಿಕ ವಿರೋಧಿ ನೀತಿ ಬಗ್ಗೆ ಜನರು ಎಚ್ಚೆತ್ತುಕೊಳ್ಳಬೇಕಾಗಿದೆ ಎಂದು ಹೇಳಿದರು.
ನಗರ ಕಾಂಗ್ರೆಸ್ ಅಧ್ಯಕ್ಷ ಹೆಚ್ ಮಹಮ್ಮದ್ ಅಲಿ ಅವರು ಮಾತನಾಡಿ, ಈ ಹಿಂದೆ ಇದ್ದ ಕಾರ್ಮಿಕ ಘಟಕ ಹೆಸರಿಗೆ ಮಾತ್ರ ಇತ್ತು, ಕೇವಲ ಐಡೆಂಟಿ ಕಾರ್ಡ್ ಗೆ ಬೇಕಾಗಿ ಹುದ್ದೆಗಳಿದ್ದವು, ಆದರೆ ಈಗ ಬ್ಲಾಕ್ ಗೆ ಸಂಬಂಧಪಟ್ಟಂತೆ ಎಲ್ಲಾ ಮುಂಚೂಣಿ ಘಟಕಗಳಿಗೆ ಸಮರ್ಥ ಅಧ್ಯಕ್ಷರ ನೇಮಕಗೊಳಿಸಲಾಗಿದೆ ಅದರೊಂದಿಗೆ ಕ್ರಿಯಾಶೀಲ ಪದಾಧಿಕಾರಿಗಳ ನೇಮಕವಾಗುತ್ತಿದೆ, ಎಲ್ಲಾ ಮುಂಚೂಣಿ ಘಟಕಗಳು ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಸಹಕಾರ ಪ್ರೋತ್ಸಾಹ ನೀಡುತ್ತಿದ್ದಾರೆ.
ಮುಂದಿನ ದಿನಗಳಲ್ಲಿ ಪಕ್ಷ ಸಂಘಟನೆಗೆ ಬಹಳ ಸಹಕಾರಿ ಯಾಗಲಿದೆ ಎಂದು ಹೇಳಿದ ಅವರು ಕಾರ್ಮಿಕರಿಗೆ ತಮಗಾಗಿ ಇರುವ ಯೋಜನೆ ಬಗ್ಗೆ ಸರಿಯಾದ ಮಾಹಿತಿ ಇರುವುದಿಲ್ಲ, ಕೆಲವು ಸಂಸ್ಥೆ ಗಳಲ್ಲಿ ದುಡಿಯುತ್ತಿರುವ ಕಾರ್ಮಿಕರಿಗೆ ಸರಿಯಾದ ವೇತನವನ್ನು ಸಿಗುತ್ತಿಲ್ಲ, ಸರಕಾರವು ಪ್ರತಿ ಕಾರ್ಮಿಕನಿಗೆ ಇಂತಿಷ್ಟು ವೇತನ ನೀಡಬೇಕು ಅದರೊಂದಿಗೆ ಪ್ರತಿಯೊಬ್ಬ ಕಾರ್ಮಿಕರಿಗೆ ಪಿ ಎಫ್ ಮತ್ತು ಇ ಎಸ್ ಐ ನೀಡಬೇಕೆಂದು ಕಡ್ಡಾಯ ಗೊಳಿಸಲಾಗಿದೆ, ಸಿದ್ದರಾಮಯ್ಯನವರ ಸರ್ಕಾರವು ಯಾವೆಲ್ಲ ಸಂಸ್ಥೆಗಳು ತನ್ನ ಕಾರ್ಮಿಕರಿಗೆ ಪಿ ಎಫ್ /ಇ ಎಸ್ ಐ ನೀಡುತ್ತಿಲ್ಲವೊ ಅವರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕೆಂಬ ಕಾನೂನು ಜಾರಿ ಮಾಡಿರುತ್ತಾರೆ, ಕಾಂಗ್ರೆಸ್ ಸರಕಾರ ತಂದಿರುವ ಈ ಎಲ್ಲಾ ಯೋಜನೆಗಳು ಕಾರ್ಮಿಕರ ಕಲ್ಯಾಣದ ಹಿತದೃಷ್ಟಿ ಯ ಉದ್ದೇಶದಿಂದ ಕೂಡಿರುತ್ತದೆ ಎಂದು ಹೇಳಿದರು ಕೆಲವು ಸರಕಾರಿ ಇಲಾಖೆಗಳಲ್ಲಿ ಹೊರಗುತ್ತಿಗೆ ನೌಕರರನ್ನು ನೇಮಕ ಮಾಡಿ ಅವರಿಗೆ ಇಎಸ್ಐ/ ಪಿಎಫ್ ಯೋಜನೆಗಳನ್ನು ನೀಡದ ಹಲವಾರು ಉದಾಹರಣೆಗಳಿವೆ ಅಂತ ಸರಕಾರಿ ಇಲಾಖೆ ಗಳ ಮುಖ್ಯಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಕೆಲಸವನ್ನು ಪುತ್ತೂರು ಕಾರ್ಮಿಕ ಘಟಕ ಮಾಡಬೇಕಾಗಿದೆ ಎಂದು ಹೇಳಿದರು.
ಬ್ಲಾಕ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ವಿ ಎಚ್ಎ ಶಕೂರ್ ಹಾಜಿ ಮಾತನಾಡಿ ಕಾರ್ಮಿಕ ಘಟಕದ ಪದಾಧಿಕಾರಿಗಳಿಗೆ ಶುಭವನ್ನು ಹಾರೈಸಿದರು. ಸಮಾರಂಭದ ಅಧ್ಯಕ್ಷರಾದ ಎಂಬಿ ವಿಶ್ವನಾಥ ರೈ ಯವರು ಮಾತನಾಡಿ ಈಗಾಗಲೇಕಾರ್ಮಿಕ ಘಟಕದ ಸಂಘಟನಾ ಕೆಲಸವನ್ನು ಶರಣ್ ಸಿಕ್ವೆರಾ ಅವರು ಮಾಡುತ್ತಾ ಬಂದಿದ್ದಾರೆ,ಕಾರ್ಮಿಕ ಘಟಕವನ್ನು ಗಟ್ಟಿ ಗೊಳಿಸುವಂತಹ ಕೆಲಸವನ್ನು ಎಲ್ಲರ ಸಹಕಾರದ ಮೂಲಕ ಖಂಡಿತ ಮಾಡುತ್ತೇವೆ ಎಂದು ಹೇಳಿದ ಅವರು ಬ್ಲಾಕಿಗೆ ಸಂಬಂಧಪಟ್ಟ ಎಲ್ಲಾ ಮುಂಚೂಣಿ ಘಟಕಗಳನ್ನು ಸಂಘಟನಾತ್ಮಕವಾಗಿ ಗಟ್ಟಿಗೊಳಿಸುವ ಕೆಲಸವನ್ನು ಬ್ಲಾಕ್ ಕಾಂಗ್ರೆಸ್ ಯಾವತ್ತೂ ಮಾಡಲು ಸಿದ್ಧವಿದೆ ಎಂದು ಹೇಳಿದರು. ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಮೌರಿಸ್ ಮಸ್ಕರೇನಸ್ ಪ್ರಾಸ್ತಾವಿಕ ಭಾಷಣ ಮಾಡಿದರು.
ಜಿಲ್ಲಾ ಕಾರ್ಮಿಕ ಘಟಕದ ಉಪಾಧ್ಯಕ್ಷ ರವೀಂದ್ರರ ರೈ ನೆಕ್ಕಿಲು ಕಾರ್ಯಕ್ರಮ ನಿರೂಪಣೆ ಮಾಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಮಿಕ ಘಟಕದ ಅಧ್ಯಕ್ಷ ಲ್ವಾರೆನ್ಸ್ ಡಿ ಸೋಜಾ ರವರನ್ನು ಬ್ಲಾಕ್ ಕಾಂಗ್ರೆಸ್ ವತಿಯಿಂದ ಸನ್ಮಾನಿಸಲಾಯಿತು. ಈ ಕಾರ್ಯಕ್ರಮದಲ್ಲಿ ಬ್ಲಾಕ್ ಉಪಾಧ್ಯಕ್ಷ ಯಾಕೂಬು ಮುಲಾರ್,ವಿಶಾಲಾಕ್ಷಿ ಬನ್ನೂರು ಪ್ರದಾನ ಕಾರ್ಯ ದರ್ಶಿಗಳಾದ ಅಮಲ ರಾಮಚಂದ್ರ,ಬಾಸ್ಕರ ಕೊಡಿ0ಬಲ, ಪೂರ್ಣೇಶ್ ಭಂಡಾರಿ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾರದಾ ಅರಸ್, ಮಹಿಳಾ ಪ್ರದಾನ ಕಾರ್ಯದರ್ಶಿ ಸೀತಾ ಉದಯ ಶಂಕರ ಭಟ್, ನೆಬಿಸ ಗುಂಪಕಲ್ಲು, ಉದ್ಯಮಿ ಗಳಾದ ಶಿವರಾಮ ಆಳ್ವ, ಸೂರಜ್ ಶೆಟ್ಟಿ ಸಾಮೆತಡ್ಕ ಉಪಸ್ಥಿತರಿದ್ದರು.