ಗಡಿ ಪ್ರದೇಶದಲ್ಲಿ ಹಗಲಿರುಳು ಕಷ್ಟಪಟ್ಟು ದುಡಿಯುತ್ತಾರೆ.. ಯಾರಿಗಾಗಿ? ಅಂತ ಕೇಳಿದರೆ ‘ನಮ್ಮ ದೇಶದ ರಕ್ಷಣೆಗಾಗಿ ‘- ಎನ್ನುವ ಪದಗಳು ಇವರ ಬಾಯಲ್ಲಿ ಹೆಮ್ಮೆಯಿಂದ ಕೇಳಿಬರುತ್ತದೆ. ಹೌದು, ಅವರೇ ದೇಶ ಕಾಯುವ ವೀರ ಯೋಧರು.ಬಿಸಿರಕ್ತ, ಯೌವನದ ಹುರುಪು ಆಹ್ಲಾದಕತೆಯನ್ನು ಬಯಸುವುದು ಸಾಮಾನ್ಯ.
ಆದರೆ ಸೈನಿಕರ ವಿಚಾರ ಮಾತ್ರ ಗಂಭೀರವಾದ ಬದುಕಿನದ್ದು. ತಮ್ಮೆಲ್ಲಾ ಮನದಾಸೆಗಳನ್ನು ಬದಿಗಿಟ್ಟು ನಿಸ್ವಾರ್ಥದಿಂದ ಸೇವೆ ಮಾಡುವ ಮನೋಭಾವದವರು. ಮಳೆ ಇರಲಿ, ನಡುಗುವ ಚಳಿ ಇರಲಿ, ನಡುಗಿಸುವ ಮಿಂಚು-ಗುಡುಗಳೇ ಇರಲಿ ಇವರ ಮುಂದೆ ನಗಣ್ಯ. ತಮ್ಮ ಜೀವದ ಜೀವನವನ್ನು ಒತ್ತೆ ಇಟ್ಟು ದುಡಿಯುವ ಕೈಗಳಿವು.ಅಂದು ಕಾರ್ಗಿಲ್ ದಿನ ಹುಟ್ಟಿಕೊಂಡಿದ್ದು ಕೂಡಾ ಮಡಿದ ಯೋಧರ ನೆನಪಿಗಾಗಿಯೇ.
ಈ ಮೂಲಕವಾದರೂ ನಮನ ಸಲ್ಲಿಸುವ ಮನೋಭಾವ ಜನತೆಯಲ್ಲಿ ಮೂಡಬೇಕು ಎಂದು. ಆದರೆ ಯಾರ ಋಣವನ್ನಾದರೂ ತೀರಿಸಬಹುದು, ದೇಶ ಕಾಯುವ ಸೈನಿಕರ ಋಣ ತೀರಿಸಲಾದೀತೇ? ಕಾರ್ಗಿಲ್ ದಿನ ಅಂತ ಮಾತ್ರವಲ್ಲದೆ ಪ್ರತಿದಿನವೂ ಯೋಧರನ್ನು ನೆನೆಯಲೇಬೇಕು.. ಸದೃಢ ಸಮಾಜದ ಸತ್ಪ್ರಜೆಯ ಮೂಲ ಮಂತ್ರ ಇದಾಗಬೇಕು.
.ಪ್ರಜ್ಞಾ ಓಡಿಲ್ನಾಳ