ಕುದ್ರೋಳಿ ಗೋಕರ್ಣನಾಥ ಕ್ಷೇತ್ರದಲ್ಲಿ ದಸರಾ ಮಹೋತ್ಸವ ಸಾಂಸ್ಕೃತಿಕ ಕಾರ್ಯಕ್ರಮದ ಕೊನೆಯ ದಿನದಂದು ತುಳುನಾಡ ಗಾನ ಗಂಧರ್ವ ಪುತ್ತೂರು ಜಗದೀಶ್ ಅಚಾರ್ಯ ಮತ್ತು ತಂಡದಿಂದ ವೈವಿಧ್ಯಮಯ ಸಂಗೀತ ಗಾನ ಸಂಭ್ರಮ ಕಾರ್ಯಕ್ರಮ ನಡೆಯಿತು.

ಗಾಯನದಲ್ಲಿ ವಿದ್ಯಾ ಸುವರ್ಣ ಮಂಗಳೂರು, ಸಮನ್ವಿ ರೈ ಪುತ್ತೂರು, ನಿರೂಪಣೆಯಲ್ಲಿ ಕೃಷ್ಣ ಪ್ರಸಾದ್ ಮಂಗಳೂರು, ವಾದ್ಯ ವೃಂದದಲ್ಲಿ ಕೀಬೋರ್ಡ್‌ನಲ್ಲಿ ಗುರು ಮಂಗಳೂರು, ತಬಲಾದಲ್ಲಿ ಅಶೋಕ್ ಕಾಸರಗೋಡು, ಗಿಟಾರ್‌ನಲ್ಲಿ ಶರತ್ ಹಳೆಯಂಗಡಿ, ಕೊಳಲಿನಲ್ಲಿ ವರುಣ್ ರಾವ್ ಮಂಗಳೂರು, ರಿದಮ್ ಪ್ಯಾಡ್‌ನಲ್ಲಿ ವಾಮನ್ ಬೈಲೂರ್ ಮತ್ತು ಪ್ರಭಾಕರ್ ಮಲ್ಲ ಸಹಕರಿಸಿದರು.

