ಮಂಗಳೂರು: 2018ರ ಜ.3 ರಂದು ಮೊಬೈಲ್ ಕಂಪನಿಯೊಂದರ ಎಕ್ಸಿಕ್ಯೂಟಿವ್, ಬಿಜೆಪಿ ಕಾರ್ಯಕರ್ತ ದೀಪಕ್ ರಾವ್ ಹತ್ಯೆ ಮಾಡಲಾಗಿತ್ತು. ಈ ಘಟನೆ ರಾಜ್ಯಾದ್ಯಂತ ಭಾರೀ ಸಂಚಲನ ಮೂಡಿಸಿತ್ತು. ದೀಪಕ್ ರಾವ್ ಹತ್ಯೆಯ ಪ್ರಮುಖ ಆರೋಪಿ ಪಿಂಕಿ ನವಾಝ್ ಈಗ ಮತ್ತೆ ಸುದ್ದಿಯಾಗಿದ್ದಾನೆ.
ದೀಪಕ್ ರಾವ್ ಹತ್ಯೆಯ ಸಾಕ್ಷಿಗಳಲ್ಲಿ ಒಬ್ಬರಾಗಿರುವ ಕಾಟಿಪಳ್ಳ 3ನೇ ವಾರ್ಡ್ ಕಾರ್ಪೊರೇಟರ್ ಲೋಕೇಶ್ ಕುಲಾಲ್ ಬೊಳ್ಳಾಜೆಗೆ ಪಿಂಕಿ ನವಾಜ್ ಆವಾಜ್, ಬೆದರಿಕೆ ಹಾಕಿರುವ ಆಡಿಯೋವೊಂದು ಈಗ ವೈರಲ್ ಆಗಿದೆ.
‘ದೀಪಕ್ ರಾವ್ ಕೊಲೆಯ ಪ್ರಧಾನ ಸಾಕ್ಷಿದಾರರನ್ನು ನೋಟ್ ಮಾಡಿ ಇಟ್ಟಿದ್ದೇವೆ’ ಎಂದು ವಾಟ್ಸ್ ಆಪ್ ಆಡಿಯೋದಲ್ಲಿ ಬಹಿರಂಗ ಹೇಳಿಕೆಯ ತುಣುಕುಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಸಾಕ್ಷಿದಾರರಲ್ಲಿ ಭಯವನ್ನುಟ್ಟಿಸುವ ಕೆಲಸ ಇದಾಗಿರಬಹುದು ಎಂದು ಚರ್ಚೆಯಾಗುತ್ತಿದೆ.