ಪುತ್ತೂರು: ಸಂಯುಕ್ತ ಖಾಝಿ ನೇಮಕ ವಿಚಾರದಲ್ಲಿ ಮಸೀದಿಯಲ್ಲಿ ಕರೆಯಲಾಗಿದ್ದ ಸಭೆಯಲ್ಲಿ ಚರ್ಚೆ ನಡೆದು, ಚರ್ಚೆ ವಿಪರೀತಕ್ಕೇರಿ ನೂಕು ನುಗ್ಗುಲು ನಡೆದಿರುವ ಘಟನೆ ಮಸೀದಿಯೊಂದರಲ್ಲಿ ನಡೆದಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಪುತ್ತೂರು ತಾಲೂಕಿನ ಸಂಯುಕ್ತ ಖಾಝಿ ನೇಮಕದ ಕುರಿತು ಚರ್ಚಿಸುವ ಉದ್ದೇಶದಿಂದ ಅ.15 ರಂದು ಅನ್ಸಾರುದ್ದೀನ್ ಜಮಾಅತ್ ಕಮಿಟಿಯ ಅಧ್ಯಕ್ಷ ಎಲ್.ಟಿ. ಅಬ್ದುಲ್ ರಜಾಕ್ ಹಾಜಿ ಅವರ ಅಧ್ಯಕ್ಷತೆಯಲ್ಲಿ ಸಭೆ ಕರೆಯಲಾಗಿತ್ತು. ಪುತ್ತೂರು ಬದ್ರಿಯಾ ಜುಮಾ ಮಸೀದಿಯ ಮದ್ರಸ ಸಭಾಂಗಣದಲ್ಲಿ ಸಭೆ ನಡೆದಿತ್ತು.
ಸಮಸ್ತದ ಅಧ್ಯಕ್ಷ ಅಸಯ್ಯದ್ ಸಯ್ಯುದುನಾ ಶೈಖುನಾ ಸಯ್ಯಮಲ್ ಉಲಮಾ ಜೆಪ್ರೀ ತಂಗಳ್ ರವರನ್ನು ಪುತ್ತೂರು ತಾಲೂಕು ಸಂಯುಕ್ತ ಖಾಝಿಯಾಗಿ ಅ.29 ರಂದು ನೇಮಕಗೊಳಿಸುವ ಕುರಿತು ಈ ಮೊದಲೇ ಹಲವು ಜಮಾ ಅತ್ ಗಳು ತೀರ್ಮಾನಿಸಿದ ವಿಚಾರವನ್ನು ಸಭೆಯಲ್ಲಿ ಪ್ರಸ್ತಾಪಿಸಿದಾಗ ಕೆಲವರು ಆಕ್ಷೇಪ ವ್ಯಕ್ತ ಪಡಿಸಿ, ಅಧ್ಯಕ್ಷರನ್ನು ತರಾಟೆಗೆತ್ತಿಕೊಳ್ಳಲು ಮುಂದಾಗಿದ್ದು, ಈ ಸಂದರ್ಭದಲ್ಲಿ ಸಭೆಯಲ್ಲಿದ್ದವರ ನಡುವೆ ಪರ-ವಿರೋಧ ಚರ್ಚೆಗಳು ನಡೆದು, ಮಾತಿನ ಚಕಮಕಿ ಜೊತೆಗೆ ನೂಕುನುಗ್ಗುಲು ನಡೆಯಿತು. ಸಭೆಯಲ್ಲಿ ಸೇರಿದ್ದ ಪ್ರಮುಖರು ರಾಜಿ ಮಾತುಕತೆ ನಡೆಸಿ ಬಳಿಕ ಪ್ರಕರಣ ಇತ್ಯರ್ಥಗೊಳಿಸಲಾಯಿತು ಎಂದು ತಿಳಿದು ಬಂದಿದ್ದು, ಆದರೇ ಮಸೀದಿಯಲ್ಲಿ ನಡೆದ ಈ ನೂಕುನುಗ್ಗಲಿನ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಸದ್ಯ ವ್ಯಾಪಕವಾಗಿ ವೈರಲ್ ಆಗುತ್ತಿದೆ.