ಪುತ್ತೂರು: ಕೋಳಿ ಸಾಗಾಟದ ಲಾರಿಯೊಂದು ಬೆಳ್ಳಂಬೆಳಗ್ಗೆ ಹೆಚ್.ಟಿ ವಿದ್ಯುತ್ ಲೈನಿಗೆ ಡಿಕ್ಕಿಯಾಗಿ ಪಲ್ಟಿಯಾದ ಘಟನೆ ಪುತ್ತೂರಿನ ಬೈಪಾಸ್ ನಲ್ಲಿ ಅ.17 ರಂದು ನಡೆದಿದೆ.
ಮೈಸೂರು ಕಡೆಯಿಂದ ಮಂಗಳೂರು ಕಡೆಗೆ ಕೋಳಿಗಳನ್ನು ತುಂಬಿಸಿಕೊಂಡು ಬರುತಿದ್ದ ಲಾರಿ ತೆಂಕಿಲ-ಬಪ್ಪಳಿಗೆ ಕ್ರಾಸ್ ಬಳಿ ಹೆಚ್.ಟಿ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ ಪಲ್ಟಿಯಾಗಿದೆ.
ಅಪಘಾತದಿಂದಾಗಿ ನಡೆದಿದ್ದು, ಅಪಘಾತದಿಂದ ನೂರಾರು ಕೋಳಿಗಳು ಸಾವನ್ನಪ್ಪಿದ್ದು, ಜೀವಂತ ಕೋಳಿಗಳೆಲ್ಲ ರಸ್ತೆಯಲ್ಲಿ ತುಂಬಿ ಹೋಗಿತ್ತು. ಹೆಚ್ ಟಿ ವಿದ್ಯುತ್ ಕಂಬ ಮುರಿದ ಕಾರಣ ಪುತ್ತೂರಿನ ಹಲವೆಡೆ ವಿದ್ಯುತ್ ವ್ಯತ್ಯಯ ಉಂಟಾಗಿದೆ.
ಪುತ್ತೂರು ಮೆಸ್ಕಾಂ ಸಿಬ್ಬಂದಿಗಳು ಹಾಗೂ ಟ್ರಾಫಿಕ್ ಪೊಲೀಸರು ಅಪಘಾತ ನಡೆದ ಸ್ಥಳಕ್ಕೆ ಆಗಮಿಸಿದ್ದು, ಅಪಘಾತದಿಂದಾಗಿ ಲಾರಿ ಚಾಲಕನಿಗೆ ಗಾಯವಾಗಿದೆ.
ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿಯಬೇಕಿದೆ.