ಬಂಟ್ವಾಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಿ ಸಿ ಟ್ರಸ್ಟ್ ರಿಜಿಸ್ಟರ್ ವಿಟ್ಲ ಇದರ ಕಾರ್ಯಕ್ಷೇತ್ರ ವ್ಯಾಪ್ತಿಯ ಕಲ್ಲಡ್ಕ ವಲಯದ ನೂತನ ಸ್ವ ಸಹಾಯ ಸಂಘಗಳ ಕೆಲಿಂಜ ಒಕ್ಕೂಟದ ಉದ್ಘಾಟನೆಯು ಮಂಗಲಪದವು ದೇವಾಡಿಗ ಸಮುದಾಯ ಭವನದಲ್ಲಿ ನಡೆಯಿತು.
ಕಲ್ಲಡ್ಕ ವಲಯಾಧ್ಯಕ್ಷರಾದ ಈಶ್ವರ ನಾಯ್ಕ ದೀಪ ಬೆಳಗಿಸಿ ನೂತನ ಅಧ್ಯಕ್ಷರಿಗೆ ಫಲತಾಂಬೂಲ ನೀಡಿ ಅಧಿಕಾರ ಹಸ್ತಾಂತರಿಸಿ, ಶುಭ ಹಾರೈಸಿದರು. ವಲಯ ಮೇಲ್ವಿಚಾರಕರಾದ ಸುಗುಣ ಶೆಟ್ಟಿ ನೂತನ ಒಕ್ಕೂಟದ ರಚನೆ ಹಾಗೂ ಅದರ ಉದ್ದೇಶ ಸದಸ್ಯರ ಜವಾಬ್ದಾರಿ ಬಗ್ಗೆ ಸವಿವರವಾಗಿ ಮಾಹಿತಿ ನೀಡಿದರು.
ಕೆಲಿಂಜ ಒಕ್ಕೂಟದ ನೂತನ ಅಧ್ಯಕ್ಷರಾಗಿ ಶ್ರೀಉಳ್ಳಾಲ್ತಿ ತಂಡದ ದಯಾನಂದ ಗೌಡ .ಬಿ .ಬೊಡ್ಡೋಣಿ, ಉಪಾಧ್ಯಕ್ಷರಾಗಿ ಪಂಚಶ್ರಿ ತಂಡದ ಶ್ಯಾಮಲಾ, ಕಾರ್ಯದರ್ಶಿಯಾಗಿ ಧರ್ಮವಿವೇಕ ತಂಡದ ಸೌಮ್ಯ, ಜೊತೆ ಕಾರ್ಯದರ್ಶಿಯಾಗಿ ಬಿಸ್ಮಿಲ್ಲಾ ತಂಡದ ಸುಮಯ್ಯ ,ಕೋಶಾಧಿಕಾರಿಯಾಗಿ ಧರ್ಮಶ್ರೀ ತಂಡದ ಭುವನೇಶ್ವರಿ ಕಾಮಟ ಆಯ್ಕೆಯಾದರು. ಕಾರ್ಯಕ್ರಮದಲ್ಲಿ ಸೇವಾ ಪ್ರತಿನಿಧಿಯಾದ ರೇಣುಕಾ ಹಾಗೂ ಒಕ್ಕೂಟ ವ್ಯಾಪ್ತಿಯ 37 ಗುಂಪಿನ ಸದಸ್ಯರು ಉಪಸ್ಥಿತರಿದ್ದರು.