ಮಂಗಳೂರು: ಆಟೋ ಚಾಲಕರೊಬ್ಬರು ಸೇತುವೆಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಗುರುಪುರದಲ್ಲಿ ನಡೆದಿದೆ.
ಮೃತ ವ್ಯಕ್ತಿಯನ್ನು ಸತೀಶ್ ಪೂಜಾರಿ ಎಂದು ಗುರುತಿಸಲಾಗಿದೆ.
ಆಟೋ ಚಾಲಕರಾಗಿದ್ದ ಸತೀಶ್ ರವರು ಕೆಲ ಸಮಯದಿಂದ ಗಂಜಿಮಠ ಜಂಕ್ಷನ್ ನಲ್ಲಿ ಫಾಸ್ಟ್ ಫುಡ್ ಗೂಡಂಗಡಿ ನಡೆಸುತ್ತಿದ್ದು, ಪತ್ನಿಯೊಂದಿಗೆ ಗಂಜಿಮಠ ಮಳಲಿ ಕ್ರಾಸ್ ಬಳಿ ವಾಸವಾಗಿದ್ದರು.
ಅ.19 ರಂದು ಕೈಕಂಬದಿಂದ ಆಗಮಿಸಿದ ಅವರು ಸೇತುವೆ ಮೇಲೆ ಸ್ಕೂಟರ್ ಇಟ್ಟು ನದಿಗೆ ಹಾರಿದ್ದಾರೆ. ಕೌಟುಂಬಿಕ ಕಲಹದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿರಬೇಕೆಂದು ಶಂಕಿಸಲಾಗಿದೆ. ಪೊಲೀಸರು ಶವ ಪತ್ತೆ ಕಾರ್ಯ ಮುಂದುವರಿಸಿದ್ದಾರೆ. ಅಷ್ಟೇ ಅಲ್ಲದೇ ಸಾಯುವ ಮುನ್ನ ಆಡಿಯೋ ರೆಕಾರ್ಡ್ ಮಾಡಿ ಪರಿಚಯಸ್ಥರಿಗೆ ಕಳಿಸಿದ್ದು, ಅದು ಈಗ ವೈರಲ್ ಆಗಿದೆ.