ಪುತ್ತೂರು: ಬಪ್ಪಳಿಗೆ ದರ್ಖಾಸ್ ಫ್ರೆಂಡ್ಸ್ ವತಿಯಿಂದ ವಾರ್ಡ್ ಸಂಖ್ಯೆ 17 ಬಿ,ಇ.ಒ. ಸದಸ್ಯರಾದ ಪದ್ಮನಾಭ ರವರ ನೇತೃತ್ವದಲ್ಲಿ ಬಪ್ಪಳಿಗೆ ಫ್ರೆಂಡ್ಸ್ ಸದಸ್ಯರಿಂದ ಕೋಲೋನಿಗೆ ಹೋಗುವ ರಸ್ತೆಯಲ್ಲಿ ಸ್ವಚ್ಛತಾ ಕಾರ್ಯಕ್ರಮ ಅ.18 ರಂದು ನಡೆಸಲಾಯಿತು.
ಕೋಲೋನಿಗೆ ಹೋಗುವ ರಸ್ತೆಯ ಬದಿಯಲ್ಲಿರುವ ಗಿಡ-ಗಂಟಿಗಳನ್ನು ಕಡಿದು ಸ್ವಚ್ಛಗೊಳಿಸಲಾಯಿತು, ಹಾಗೆಯೇ ರಸ್ತೆ ಬದಿಯ ಹೊಂಡಗಳ ಮಣ್ಣು ತೆಗೆದು ನೀರು ಸರಾಗವಾಗಿ ಹೋಗುವಂತೆ ಮಾಡಲಾಯಿತು. ಸ್ವಚ್ಛತಾ ಕಾರ್ಯಕ್ರಮದಲ್ಲಿ ಬಪ್ಪಳಿಗೆ ಫ್ರೆಂಡ್ಸ್ ತಂಡದ ಎಲ್ಲಾ ಸದಸ್ಯರು ಭಾಗವಹಿಸಿದ್ದರು.


































