ಪುತ್ತೂರು: ಆಟೋ ರಿಕ್ಷಾ ಚಾಲಕರೊಬ್ಬರಿಗೆ ತಂಡವೊಂದು ಹಲ್ಲೆ ನಡೆಸಿ ಪರಾರಿಯಾದ ಘಟನೆ ಗಡಿಪಿಲ ರೈಲ್ವೇ ಗೇಟ್ ಬಳಿ ಅ.19 ರಂದು ತಡರಾತ್ರಿ ನಡೆದಿದೆ.
ಹಲ್ಲೆಗೊಳಗಾದವರನ್ನು ನರಿಮೊಗರು ಗ್ರಾಮದ ವೀರಮಂಗಲ ನಿವಾಸಿ ರಿಕ್ಷಾ ಚಾಲಕ ಚೇತನ್ ಯಾನೆ ಲಕ್ಷ್ಮಣ್ ಎಂದು ಗುರುತಿಸಲಾಗಿದೆ.ಚೇತನ್ ಯಾನೆ ಲಕ್ಷ್ಮಣ್ ಅವರು ವೆಲ್ಡಿಂಗ್ ಕೆಲಸ ಮಾಡುತ್ತಿದ್ದು, ರಾತ್ರಿ ವೇಳೆ ತನ್ನ ರಿಕ್ಷಾದಲ್ಲಿ ಮನೆಗೆ ಹೋಗುತ್ತಿದ್ದಾಗ ಗಡಿಪಿಲ ರೈಲ್ವೇ ಗೇಟ್ ಬಳಿ ಆಕ್ಟೀವಾ ಮತ್ತು ಬೈಕ್‌ನಲ್ಲಿ ಬಂದ ತಂಡ ರಿಕ್ಷಾವನ್ನು ನಿಲ್ಲಿಸಿ ಚಾಲಕ ಲಕ್ಷ್ಮಣ್ ರವರಿಗೆ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ.
ಹಲ್ಲೆ ನಡೆಸಿದವರ ಪೈಕಿ ಓರ್ವ ಹ್ಯಾರೀಸ್ ಎಂಬ ಮಾಹಿತಿ ಪೊಲೀಸರಿಗೆ ಲಭ್ಯವಾಗಿದ್ದು, ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದು,ತನಿಖೆ ನಡೆಸುತ್ತಿದ್ದಾರೆ.