ಬೆಟ್ಟಂಪಾಡಿ: ಮಿತ್ತಡ್ಕ ನಿವಾಸಿ ರಾಮ ನಾಯ್ಕ (66 ) ರವರು ಹೃದಯಾಘಾತದಿಂದ ಅ.21 ರಂದು ನಿಧನರಾದರು.
ಅ. 21ರ ಬೆಳಿಗ್ಗೆ ಹೃದಯ ನೋವು ಕಾಣಿಸಿಕೊಂಡ ಹಿನ್ನೆಲೆ ತಕ್ಷಣ ಅವರನ್ನು ಪುತ್ತೂರಿನ ಆಸ್ಪತ್ರೆಗೆ ಕರೆತರಲಾಯಿತಾದರೂ ದಾರಿ ಮಧ್ಯದಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದು ಬಂದಿದೆ.
ಮೃತರು ಪತ್ನಿ ಆರೋಗ್ಯ ಆಶಾ ಕಾರ್ಯಕರ್ತೆ ಪುಷ್ಪಾವತಿ, ಪುತ್ರ ಪ್ರವೀಣ್ ಕುಮಾರ್, ಪುತ್ರಿಯರಾದ ಪ್ರತಿಭಾ ಮತ್ತು ಪ್ರಸನ್ನ, ಅಳಿಯಂದಿರು ಹಾಗೂ ಸಹೋದರರನ್ನು ಅಗಲಿದ್ದಾರೆ.
ಮೃತರ ಮನೆಗೆ ಬೆಟ್ಟಂಪಾಡಿ ಗ್ರಾ.ಪಂ. ಉಪಾಧ್ಯಕ್ಷ ವಿನೋದ್ ಕುಮಾರ್ ರೈ ಗುತ್ತು, ಸದಸ್ಯರಾದ ಪಾರ್ವತಿ ಲಿಂಗಪ್ಪ ಗೌಡ, ಎಂ.ಎಸ್. ಗಂಗಾಧರ ಗೌಡ, ಮಹೇಶ್ ಕೋರ್ಮಂಡ, ರಾಷ್ಟ್ರೀಯ ಸ್ವಯಂಸೇವಕ ಸಂಘದ ತಾಲೂಕು ಸಹಕಾರ್ಯವಾಹ ನವೀನ್ ಕುಮಾರ್ ಮತ್ತಿತರರು ಭೇಟಿ ನೀಡಿ ಸಂತಾಪ ಸೂಚಿಸಿದರು.