ಪುತ್ತೂರು: ಸರಿಸುಮಾರು 380 ವರ್ಷಗಳ ಇತಿಹಾಸವಿರುವ ಕೆಮ್ಮಿಂಜೆ ಗ್ರಾಮದ ಮೊಟ್ಟೆತ್ತಡ್ಕ ಶ್ರೀ ಕೊರಗಜ್ಜ ಮತ್ತು ಶ್ರೀ ಆದಿಬ್ರಹ್ಮ ಮೊಗೇರ್ಕಳ ದೈವಸ್ಥಾನದ ಶ್ರೀ ಕ್ಷೇತ್ರ ಮಣ್ಣಾಪು ಕೊರಗಜ್ಜ ದೈವಸ್ಥಾನದ ಜೀರ್ಣೋದ್ಧಾರ, ಹಾಗೂ ಮೂಲ ಶಿಲಾ ಪುನರ್ ಪ್ರತಿಷ್ಠೆ ಮತ್ತು ನೇಮೋತ್ಸವವು ಕೆಮ್ಮಿಂಜೆ-ಮಣ್ಣಾಪು ಎಂಬಲ್ಲಿ ಜ.೨೫ ರಂದು ನಡೆಯಲಿದ್ದು, ಮಣ್ಣಾಪು ಕೊರಗಜ್ಜನ ಮಹಿಮೆಯ ಕುರಿತು ಎಸ್.ಬಿ.ಎಂ ಕ್ರಿಯೇಷನ್ಸ್‌ನಡಿಯಲ್ಲಿ ರಚಿಸಲಾದ `ಮಣ್ಣಾಪುದ ಮಾಯೆ’ ವೀಡಿಯೋ ಆಲ್ಬಂ ಯೂಟ್ಯೂಬ್ ಚ್ಯಾನೆಲ್‌ನಲ್ಲಿ ಕಾಣಸಿಗಲಿದ್ದು, ಇದರ ಆಮಂತ್ರಣ ಪತ್ರಿಕೆ ಬಿಡುಗಡೆಯು ಕೆಮ್ಮಿಂಜೆ-ಮಣ್ಣಾಪು ಎಂಬಲ್ಲಿ ಜ.17 ರಂದು ನಡೆದಿತ್ತು.
ನವೀನ್ ಎಂ. ರವರು ಸಾಹಿತ್ಯ ಬರೆದು ನಿರ್ದೇಶಿಸಿರುವ ಈ ಆಲ್ಬಮ್ ಸಾಂಗ್ ಬಿಡುಗಡೆ ಜ.25 ರಂದು ನಡೆಯಲಿದೆ.