ಮಂಗಳೂರು : ಕಾನೂನು ವಿದ್ಯಾರ್ಥಿನಿಗೆ ಲೈಂಗಿಕ ದೌರ್ಜನ್ಯ ಆರೋಪದಲ್ಲಿ ಆರೋಪಿಯಾಗಿರುವ ಮಂಗಳೂರಿನ ವಕೀಲ ಕೆ.ಎಸ್.ಎನ್. ರಾಜೇಶ್ ಭಟ್ ಅವರು ಬಾರ್ ಅಸೋಸಿಯೇಷನ್ನಿಂದ ಅಮಾನತು ಆಗಿದ್ದಾರೆ.
ಜೊತೆಗೆ ಎಸಿಬಿಯ ಸ್ಪೆಷಲ್ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ ಕೂಡ ಕಾರ್ಯನಿರ್ವಹಿಸದಿರಲು ಸೂಚನೆ ಕೊಡಲಾಗಿದೆ. ಎಸಿಬಿ ಪೊಲೀಸ್ ಅಧೀಕ್ಷಕರಿಂದ ಈ ಸೂಚನಾ ಪತ್ರ ನೀಡಲಾಗಿದೆ.
ಅಷ್ಟೇ ಅಲ್ಲದೆ, ಆರೋಪಿ ಕೆ.ಎಸ್.ಎನ್. ರಾಜೇಶ್ ಅವರ ಸನ್ನದು ಅಮಾನತು ಮಾಡಲಾಗಿದೆ. ಕರ್ನಾಟಕ ವಕೀಲರ ಪರಿಷತ್ನಿಂದ ಸ್ವಯಂ ಪ್ರೇರಿತ ಕ್ರಮ ಕೈಗೊಳ್ಳಲಾಗಿದೆ.
ಆರೋಪಿ ವಕೀಲ ಕೆ.ಎಸ್.ಎನ್. ರಾಜೇಶ್ ವಿರುದ್ಧ ವಿಚಾರಣೆ ನಡೆಸಲು ಬಾರ್ ಕೌನ್ಸಿಲ್ ನಿರ್ಧಾರ ಮಾಡಿದೆ. ವಕೀಲಿಕೆ ನಡೆಸದಂತೆ ಸನ್ನದು ಅಮಾನತು ಮಾಡಲಾಗಿದೆ. ಎಲ್. ಶ್ರೀನಿವಾಸ ಬಾಬು ಅಧ್ಯಕ್ಷತೆಯಲ್ಲಿ ನಡೆದ ಬಾರ್ ಕೌನ್ಸಿಲ್ ಸಭೆಯಲ್ಲಿ ಇಂದು ಈ ಬಗ್ಗೆ ನಿರ್ಧಾರ ಮಾಡಲಾಗಿದೆ.