ಪುತ್ತೂರು: ಸವಣೂರು ಮುಗೇರು ಶ್ರೀಮಹಾವಿಷ್ಣು ಮೂರ್ತಿ ದೇವಾಲಯದ ಗೌರವಾಧ್ಯಕ್ಷರಾದ ಎಂ.ಮುರಳಿ ಮೋಹನ್ ಶೆಟ್ಟಿ ( 76) ರವರು ಕೊರೊನಾದಿಂದಾಗಿ ಅ.23 ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಮುರಳಿ ಮೋಹನ್ ಶೆಟ್ಟಿ ರವರು ಅರೇಲ್ತಡಿ ದೈವಸ್ಥಾನದ ಅಧ್ಯಕ್ಷ, ಗೌರವಾಧ್ಯಕ್ಷರಾಗಿ ಹಾಗೂ ಈಶ್ವರಮಂಗಳ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಆಡಳಿತ ಮೋಕ್ತೇಸರರಾಗಿ ಮತ್ತು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದ ಟ್ರಸ್ಟಿಯಾಗಿಯೂ ಕಾರ್ಯನಿರ್ವಹಿಸಿದ್ದಾರೆ.
ಮೃತರು ಪತ್ನಿ ಸುಮನಾ ಎಂ.ಶೆಟ್ಟಿ, ಪುತ್ರ ರಾಮ್ ಗಣೇಶ್ ರನ್ನು ಅಗಲಿದ್ದಾರೆ.
ಇಂಜಿನಿಯರ್ ಆಗಿದ್ದ ಮುರಳಿಮೋಹನ್ ಶೆಟ್ಟಿ ರವರ ನಿಧನಕ್ಕೆ ಹಲವು ಮಂದಿ ಗಣ್ಯರು ಸಂತಾಪ ಸೂಚಿಸಿದ್ದಾರೆ.