ಮಂಗಳೂರು: ಹಿಂದೂ ಧಾರ್ಮಿಕ ಸ್ಥಳಗಳನ್ನು ಅಕ್ರಮವಾಗಿ ಹೇಡಿಗಳಂತೆ ರಾತ್ರಿ ಪ್ರವೇಶಿಸಿ ಭಗ್ನಗೊಳಿಸುವವರಿಗೆ ಕ್ಷಮೆ ನೀಡಲಾಗದು. ಧಾರ್ಮಿಕ ಭಾವನೆಗಳ ಮೂಲಕ ಕೆಣಕಿದರೆ ನಾವು ಕಾನೂನು ಮೂಲಕ ಮರೆಯಲಾದ ಪಾಠ ಕಲಿಸುತ್ತೇವೆ ಎಂದು ಶಾಸಕ ಡಾ.ಭರತ್ ಶೆಟ್ಟಿ ಕಠಿಣ ಎಚ್ಚರಿಕೆ ನೀಡಿದ್ದಾರೆ.
‘ಹಿಂದೂ ಪೂಜಾ ಸ್ಥಳಗಳನ್ನು ಭಗ್ನಗೊಳಿಸುವ ಮೂಲಕ ಕ್ಷೇತ್ರದಲ್ಲಿ ಕೋಮು ಭಾವನೆ ಕೆರಳಿಸುವವರ ವಿರುದ್ದ ವಿಶೇಷ ಕಾರ್ಯಾಚರಣೆ ನಡೆಸಿ ಕಾನೂನು ಕ್ರಮಕೈಗೊಳ್ಳಬೇಕು’ ಎಂದು ಶಾಸಕ ಡಾ.ಭರತ್ ಶೆಟ್ಟಿ ಪೊಲೀಸ್ ಇಲಾಖೆಗೆ ಸೂಚಿಸಿದರು.
ಬೈಕಂಪಾಡಿಯಲ್ಲಿ ಕರ್ಕೇರ ನಾಗ ಮೂಲಸ್ಥಾನ ವಿಗ್ರಹ ಭಗ್ನ ಗೊಳಿಸಿದ ಬಳಿಕ ಕೆಲವೇ ದಿನದ ಅಂತರದಲ್ಲಿ ಇದೀಗ ಕೂಳೂರಿನಲ್ಲಿ ನಡೆದಿದೆ. ‘ನನ್ನ ಕ್ಷೇತ್ರದಲ್ಲಿ ಕೋಮು ಸಂಘರ್ಷ ಉಂಟು ಮಾಡಲು ಷಡ್ಯಂತ್ರ ನಡೆಸುವವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಲಾಗುವುದು.
ದೇವಸ್ಥಾನ, ನಾಗಬನ, ದೈವಸ್ಥಾನಗಳು ಹಿಂದೂಗಳ ಪೂಜನೀಯ ಸ್ಥಳಗಳಾಗಿದ್ದು, ಇವುಗಳನ್ನು ಧ್ವಂಸಗೊಳಿಸುವ ಷಡ್ಯಂತ್ರವನ್ನು ಪತ್ತೆ ಹಚ್ಚಿ ಜೈಲಿಗೆ ತಳ್ಳುತ್ತೇವೆ. ಮುಂದಿನ ದಿನಗಳಲ್ಲಿ ಇದಕ್ಕಾಗಿ ವಿಶೇಷ ತಂಡ ರಚನೆ ಮಾಡಿ ಈ ರೀತಿಯ ಹೀನ ಕೃತ್ಯ ಮಾಡುವ ಅಪರಾಧಿಗಳನ್ನು ಮಟ್ಟ ಹಾಕುವಂತೆ ಗೃಹ ಸಚಿವರಿಗೆ ಮನವಿ ಮಾಡಲಾಗುವುದು’ ಎಂದರು.
ಈ ಸಂದರ್ಭ ಕಾವೂರು ಪೊಲೀಸ್ ಠಾಣೆಯ ಅಧಿಕಾರಿಗಳು,ಮನಪಾ ಸದಸ್ಯ ಕಿರಣ್ ಕುಮಾರ್ ಕೋಡಿಕಲ್, ಸಂಘಟನೆಯ ಮುಖಂಡರಾದ ಭುಜಂಗ ಕುಲಾಲ್,ಪುನೀತ್ ಅತ್ತಾವರ, ಬಿಜೆಪಿ ಮುಖಂಡರು, ನಾಗಬನಕ್ಕೆ ಸಂಬಂಧಪಟ್ಟ ಮನೆಯವರು ಉಪಸ್ಥಿತರಿದ್ದರು.