ಚಿತ್ರ : ವಸಂತ್ ಆರ್ಯಾಪು
ಸಂಪ್ಯ; ಬ್ರಹ್ಮ ಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಗ್ರಾಮ ಸಮಿತಿ ಆಶ್ರಯದಲ್ಲಿ ಅ.24 ರಂದು ಸಂಪ್ಯ ಅಕ್ಷಯ ಕಾಲೇಜಿನಲ್ಲಿ ಗುರು ಪೂಜಾ ಕಾರ್ಯಕ್ರಮ ನೆರವೇರಿತು.

ಜಗದೀಶ್ ಶಾಂತಿ ಇವರ ನೇತ್ರತ್ವದಲ್ಲಿ ನಡೆದ ಗುರು ಪೂಜೆ ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಸಭಾ ಅಧ್ಯಕ್ಷ ತೆಯನ್ನು ಗೆಜ್ಜೆಗಿರಿ ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ರೂ, ಅಕ್ಷಯ ಕಾಲೇಜು ಚೇರ್ ಮ್ಯಾನ್ ಜಯಂತ ನಡುಬೈಲು ವಹಿಸಿದ್ದರು.

ಕಾರ್ಯಕ್ರಮ ದ ಉದ್ಘಾಟನೆ ಯನ್ನು ಪುತ್ತೂರು ಬಿಲ್ಲವ ಸಂಘ ದ ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿ ದೀಪ ಬೆಳಗಿಸಿ ಉದ್ಘಾಟಿಸಿದರು.

ಪತ್ರಕರ್ತ ಸಂತೋಷ್ ಶಾಂತಿ ನಗರ ಗುರು ಸಂದೇಶ ನೀಡಿದರು.. ಮುಖ್ಯ ಅತಿಥಿ ಗಳಾಗಿ ರಾಮಜಾಲು ಬ್ರಹ್ಮ ಬೈದರ್ಕಳ ಗರಡಿ ಮೊಕ್ತೇಸರರಾದ ಸಂಜೀವ ಪೂಜಾರಿ ಕೂರೇಲು, ಯುವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷ ಡಾ. ರಾಜಾರಾಮ್. ಕೆ.ಬಿ. ಆರ್ಯಾಪು ಗ್ರಾಮ ಪಂಚಾಯತ್ ಅಧ್ಯಕ್ಷೆ ಸರಸ್ವತಿ, ಕರ್ನಾಟಕ ಬ್ಯಾಂಕ್ ನಿಡುವಳೆ ಶಾಖೆಯ ಸಹಾಯಕ ಪ್ರಬಂಧಕ ಹರೀಶ್ ಪೂಜಾರಿ ನಿಡುವಾಳೆ, ಪುತ್ತೂರು ಬಿಲ್ಲವ ಮಹಿಳಾ ವೇದಿಕೆ ಅಧ್ಯಕ್ಷೆ ಶ್ರೀಮತಿ ಚಂದ್ರಕಲಾ ಮುಕ್ವೆ, ಆರ್ಯಾಪು ವಲಯ ಸಂಚಾಲಕ ರಾಜೇಶ್ ಪಾಣಾಜೆ ಉಪಸ್ಥಿತರಿದ್ದು ಶುಭ ಹಾರೈಸಿದರು.


