ಸುಳ್ಯ: ಹೊಳೆಯಲ್ಲಿ ಸ್ನಾನಕ್ಕಿಳಿದ ವ್ಯಕ್ತಿಯೊಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಅ.24 ರಂದು ಉಬರಡ್ಕ ಗ್ರಾಮದ ಕುತ್ತಮೊಟ್ಟೆಯಲ್ಲಿ ನಡೆದಿದೆ.
ಮೃತ ವ್ಯಕ್ತಿಯನ್ನು ಉಬರಡ್ಕ ಕುತ್ತಮೊಟ್ಟೆ ನಿವಾಸಿ ರಾಮ (63) ಎಂದು ಗುರುತಿಸಲಾಗಿದೆ.
ರಾಮ ರವರು ಮನೆಯ ಪಕ್ಕದಲ್ಲಿರುವ ಹೊಳೆಗೆ ಸ್ಥಾನಕ್ಕೆಂದು ತೆರಳಿದ್ದು, ವಾಪಸು ಬಾರದೆ ಇದ್ದಾಗ ಮನೆಯವರು ಅವರನ್ನು ಹುಡುಕಾಡಿದಾಗ ಹೊಳೆಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಮೃತದೇಹವನ್ನು ಹೊಳೆಯಿಂದ ಮೇಲೆತ್ತಲು ಪೊಲೀಸರೊಂದಿಗೆ ರಾಜ್ ಸೌಂಡ್ಸ್ ನ ರಾಜೇಶ್, ಪ್ರಗತಿ ಅಂಬ್ಯುಲೆನ್ಸ್ ನ ಅಚ್ಚು ಪ್ರಗತಿ, ಗುರುವ, ಲೊಕೇಶ್, ರೋಹಿತ್ ಸಹಕರಿಸಿದರು.
ಸುಳ್ಯ ಠಾಣಾ ಪೋಲಿಸರು ಸ್ಥಳಕ್ಕೆ ಆಗಮಿಸಿ, ಮಹಜರು ಮಾಡಿ ಸರಕಾರಿ ಆಸ್ಪತ್ರೆ ತಂದು ಶವಪರೀಕ್ಷೆ ನಡೆಸಿ ಬಳಿಕ ಕೊಡಿಯಾಲ್‌ಬೈಲ್ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ.



























