ಪುತ್ತೂರು: ಬ್ಲಾಕ್ ಕಾಂಗ್ರೆಸ್ ಮಹಿಳಾ ಘಟಕದ ಮಾಸಿಕ ಸಭೆಯು ಅಧ್ಯಕ್ಷರಾದ ಶಾರದಾ ಅರಸ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿಯನ್ನು ಆಚರಿಸಲಾಯಿತು.
ಅಕ್ರಮ ಸಕ್ರಮ ಸಮತಿಯ ಮಾಜಿ ಸದಸ್ಯರಾದ ಶುಭ ಮಾಲಿನಿ ಮಲ್ಲಿ ಯವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬ್ರಿಟಿಷರ ವಿರುದ್ಧ ಹೋರಾಟ ಮಾಡಿದ ರಾಜ್ಯದ ವೀರ ಮಹಿಳೆ ಕಿತ್ತೂರ ರಾಣಿ ಚೆನ್ನಮ್ಮರ ಸಾಹಸದ ಬಗ್ಗೆ ವಿವರಿಸಿದರು. ಮಹಿಳೆಯರಿಗೆ ಹಲವಾರು ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಬ್ಲಾಕ್ ಎಸ್ಟಿ ಘಟಕದ ಅಧ್ಯಕ್ಷರಾದ ಮಹಾಲಿಂಗ ನಾಯ್ಕ,ಬ್ಲಾಕ್ ಪ್ರಧಾನ ಕಾರ್ಯದರ್ಶಿ ಅಮಲಾ ರಾಮಚಂದ್ರ ಭಟ್,ಅಲ್ಪಸಂಖ್ಯಾತರ ಘಟಕ ಅಧ್ಯಕ್ಷರಾದ ಶಕೂರು ಹಾಜಿ,ಬ್ಲಾಕ್ ಕಾರ್ಯದರ್ಶಿ ಮನಮೋಹನ ರೈ ವಿವಿಧ ಸ್ಪರ್ಧೆಯಲ್ಲಿ ತೀರ್ಪುಗಾರರಾಗಿ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ನಗರ ಕಾಂಗ್ರೆಸ್ ಅಧ್ಯಕ್ಷರ ಹೆಚ್ ಮಹಮ್ಮದ್ ಆಲಿ, ಪಂಚಾಯತ್ ರಾಜ್ಯ ಸಂಘಟನೆಯ ಅಧ್ಯಕ್ಷರಾದ ಸಂತೋಷ್ ಬಂಡಾರಿ ಚಿಲ್ಮೆತ್ತಾರ್,ಬ್ಲಾಕ್ ಕಾರ್ಮಿಕ ಘಟಕದ ಅಧ್ಯಕ್ಷರಾದ ಶಾರೋನ್ ಸಿಕ್ವೇರಾ, ರಾಜ್ಯ ಕೊಂಕಣಿ ಅಕಾಡೆಮಿಯ ಮಾಜಿ ಸದಸ್ಯರಾದ ದಾಮೋದರ ಬಂಡಾರ್ಕರ್,ಪಾಣಾಜೆ ವಲಯ ಕಾಂಗ್ರೆಸ್ ಅಧ್ಯಕ್ಷರಾದ ಬಾಬು ರೈ ಕೋಟೆ, ಕಚೇರಿ ಕಾರ್ಯದರ್ಶಿ ಸಿರಿಲಿ ರೋಡ್ರಿಗಸ್, ಕೋವಿಡ್ ಸೇವಕ್ ಸಿಮ್ರನ್ ನಝೀರ್, ತಾರನಾಥ ನಿಡ್ಪಲ್ಲಿ, ದಿನೇಶ್ ಕಾಮತ್,
ಬ್ಲಾಕ್ ಮಹಿಳಾ ಕಾಂಗ್ರೆಸ್ ಪದಾಧಿಕಾರಿಗಳಾದ ಜೆಸಿಂತಾ ಗೊನ್ಸಾಲ್ವಿಸ್, ಭವಾನಿ ಹುಕ್ರಪ್ಪ ಗೌಡ, ರೋಜ್ಲಿನ್ ಡಿ ಕಾಸ್ಟ, ಯೋಗಿನಿ ರೈಮೇಗಿನಗುತ್ತು ,ಪ್ರತಿಮಾ ರೈ, ಕಲ್ಪವಲ್ಲಿ, ವನಿತಾ ಆಚಾರ್ಯ ಒಳತಡ್ಕ,ನಳಿನಿ. ಪಿ, ಸಿಂತಿಯಾ ಡಿ ಸೋಜ, ಪ್ರತೀಕ ಪೂರ್ಣೇಶ್, ವೀಣಾ ಡಿ ಕೆ, ಗ್ರೆಟ್ಟಾ ಡಿಸೋಜ, ಹರಿಣಿ, ಗ್ರಾಮ ಪಂಚಾಯತ್ ಸದಸ್ಯರುಗಳಾದ ಶಾರದಾ, ಮೈಮುನ ತುಲ್ ಮೆಹರ ಒಳಮೊಗ್ರು ಗ್ರಾಮದ ಉಪಾಧ್ಯಕ್ಷರಾದ ಸುಂದರಿ, ಜಿಲ್ಲಾ ಮಹಿಳಾ ಕಾಂಗ್ರೆಸ್ ಉಪಾಧ್ಯಕ್ಷರಾದ ಆಸ್ಮಾ ಗಟ್ಟಮನೆ, ಸಹರ ಬಾನು, ಜಿಲ್ಲಾ ಕಾರ್ಯದರ್ಶಿಗಳಾದ ವಿಜಯಲಕ್ಷ್ಮಿ ಕೂರ್ನಡ್ಕ ಸೇರಿದಂತೆ ಹಲವಾರು ಮಹಿಳೆಯರು ಉಪಸ್ಥಿತರಿದ್ದರು.
ಒಳಮೊಗ್ರು ಗ್ರಾಮ ಪಂಚಾಯತ್ ಸದಸ್ಯರಾದ ಬಿ.ಸಿ ಚಿತ್ರರವರು ಪ್ರಾಸ್ತಾವಿಕ ಭಾಷಣ ಮಾಡಿದರು, ಪಾಣಾಜೆ ಗ್ರಾಮ ಪಂಚಾಯತ್ ಸದಸ್ಯರಾದ ವಿಮಲ ನಾಯ್ಕ್ ಕಾರ್ಯಕ್ರಮ ನಿರೂಪಣೆ ಮಾಡಿದರು, ಮಾಜಿ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ವಿಶಾಲಾಕ್ಷಿ ಬನ್ನೂರು ಸ್ವಾಗತಿಸಿ, ಬ್ಲಾಕ್ ಮಹಿಳಾ ಕಾರ್ಯದರ್ಶಿಯಾದ ಸೀತಾ ಉದಯ ಶಂಕರ ಭಟ್ ಚಂಬರ ಕಟ್ಟ ವಂದಿಸಿದರು.