ಸಾಮಾಜಿಕ ಜಾಲತಾಣದಲ್ಲಿ ಹರಿದಾಡುವ ಕೆಲವು ದೃಶ್ಯಗಳು ನಮಗೆ ಬಹಳ ಆಪ್ತವಾಗಿ ಬಿಡುತ್ತವೆ. ಎಷ್ಟೆಂದರೇ ಪದೇ ಪದೇ ಆ ದೃಶ್ಯವನ್ನೇ ನೋಡಿ ಆನಂದ ಪಡುತ್ತೇವೆ. ಇದೀಗ ಕೂಡ ಅಂತಹದೇ ದೃಶ್ಯವೊಂದು ಭಾರೀ ವೈರಲ್ ಆಗುತ್ತಿದ್ದು, ನೆಟ್ಟಿಗರ ಮನಸ್ಸು ಗೆಲ್ಲುವಲ್ಲಿ ಯಶಸ್ವಿಯಾಗಿದೆ.
ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ ಸಮವಸ್ತ್ರದಲ್ಲಿರುವ ಅರೆಸೇನಾ ಪಡೆಗೆ ಅರ್ಜುನ್ ಎಂಎಸ್ ಎಂಬುವವರ ಪುಟಾಣಿ ಮಗ ‘ವೀರ್’ ಸೆಲ್ಯೂಟ್ ಮಾಡಿರುವ ದೃಶ್ಯ ಇದೀಗ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಈ ವಿಡಿಯೋವನ್ನು ಸಚಿವ ರಾಜೀವ್ ಚಂದ್ರಶೇಖರ್ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ‘”ಕೆಲವರು ಚಿಕ್ಕ ವಯಸ್ಸಿನಲ್ಲಿಯೇ ಸೈನಿಕರನ್ನು ಗೌರವಿಸುವುದು ಮತ್ತು ದೇಶಪ್ರೇಮವನ್ನು ಮೈಗೂಡಿಸಿಕೊಂಡಿರುತ್ತಾರೆ” ಎಂದು ಅಡಿಬರಹ ಬರೆದಿದ್ದಾರೆ.
ರಾಜೀವ್ ಅವರ ಟ್ವೀಟ್ ಗೆ ರಿಯಾಕ್ಟ್ ಮಾಡಿರುವ ಅರ್ಜುನ್ ಎಂಎಸ್ “ಈ ದೃಶ್ಯವನ್ನು ಹಂಚಿಕೊಂಡಿರುವುದಕ್ಕೆ ಧನ್ಯವಾದಗಳು ಸರ್. ನನ್ನ ಮಗ ವೀರ್ ಬಹಳ ಸಂತೋಷಪಟ್ಟಿದ್ದಾನೆ” ಎಂದು ಹೇಳಿದ್ದಾರೆ.
Thank you for sharing my son Veer's video ❤️🙏😇 @jhbhis 🙏 https://t.co/LmbsVBQ5Sw
— Arjun MS 🇮🇳 (@iamArjunMS) October 25, 2021