ವಿಟ್ಲ: ವಿಟ್ಲದಿಂದ ತನ್ನ ಮನೆಗೆ ಹೋಗುತ್ತಿದ್ದ ಮಹಿಳೆಯ ಕರಿಮಣಿ ಸರವನ್ನು ಕದ್ದೋಯ್ದು ಪರಾರಿಯಾದ ಘಟನೆ ಇಂದು ಮಧ್ಯಾಹ್ನ ನಡೆದಿದೆ.
ಉಕ್ಕುಡ ಸಮೀಪದ ಗುಂಪಲಡ್ಕ ನಿವಾಸಿ ಕಮಲ(55) ಎಂಬವರು ಸೌಪರ್ಣಿಕ ಕ್ರಷರ್ ಸಮೀಪದ ರಸ್ತೆಯಲ್ಲಿ ತನ್ನ ಮನೆಗೆ ಮಧ್ಯಾಹ್ನ ನಡೆದು ಹೋಗುತ್ತಿದ್ದ ಸಂದರ್ಭ ಕೆಂಪು ಬಣ್ಣದ ಹೋಂಡಾ ಆಕ್ಟಿವಾ ಸ್ಕೂಟರಲ್ಲಿ ಬಂದ ಅಪರಿಚಿತನೋರ್ವ ಮಹಿಳೆಯ 3.5ಪವನ್ ತೂಕದ ಕರಿಮಣಿಸರ ಎಗರಿಸಿ ಪರಾರಿಯಾಗಿದ್ದಾನೆ.
ಘಟನೆ ನಡೆದ ತಕ್ಷಣ ಮಹಿಳೆಯು ತನ್ನ ಮಗ ವಸಂತನಿಗೆ ಕರೆ ಮಾಡಿ ತಿಳಿಸಿದ್ದಾರೆ. ಪರಾರಿಯಾದ ಸರಗಳ್ಳನಿಗಾಗಿ ಸ್ಥಳೀಯರು ಮತ್ತು ವಿಟ್ಲ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ.