ಬೆಂಗಳೂರು : ಕನ್ನಡ ಚಿತ್ರರಂಗ ಕಂಡ ಶ್ರೇಷ್ಠ ನಟರೊಬ್ಬರಲ್ಲಾದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದು, ತಂದೆ ವರನಟ ಡಾ. ರಾಜ್ ಕುಮಾರ್ ಅವರಂತೆ ನೇತ್ರದಾನ ಮಾಡಿದ್ದಾರೆ.
46 ರ ಹರೆಯದ ಅಭಿಮಾನಿಗಳ ಪ್ರೀತಿಯ ಅಪ್ಪು ಶುಕ್ರವಾರ ಬೆಳಗ್ಗೆ ತೀವ್ರ ಹೃದಯಾಘಾತದಿಂದ ವಿಕ್ರಂ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಅವರ ಆಸೆಯಂತೆ ಕಣ್ಣುಗಳನ್ನುತೆಗೆದು ಸಂರಕ್ಷಿಸಿಡಲಾಗಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.
ಅಭಿಮಾನಿಗಳು ಕಣ್ಣೀರ ಕೊಡಿ ಹರಿಸುತ್ತಿದ್ದು, ಸಂಪೂರ್ಣ ಚಿತ್ರರಂಗ ಬರ ಸಿಡಿಲು ಎರಗಿದ ಸ್ಥಿತಿಗೆ ಜಾರಿದೆ.