ಪುತ್ತೂರು: ಆಕ್ಟಿವಾ ಮತ್ತು ಲಾರಿ ನಡುವೆ ಅಪಘಾತ ಸಂಭವಿಸಿ ಕ್ಯಾಂಪ್ಕೋ ಚಾಕೋಲೇಟ್ ಸಂಸ್ಥೆಯ ಮಾರ್ಕೆಟಿಂಗ್ ಮ್ಯಾನೇಜರ್ ಮೃತ ಪಟ್ಟ ಘಟನೆ ಅ.30 ರಂದು ಮಂಗಳೂರಿನ ಪಡೀಲ್ ನಲ್ಲಿ ನಡೆದಿದೆ.
ಮೃತ ಪಟ್ಟವರನ್ನು ಚಾಕೋಲೇಟ್ ಸಂಸ್ಥೆಯ ಮಾರ್ಕೆಟಿಂಗ್ ಮ್ಯಾನೇಜರ್ ವಿದ್ಯಾ ಕಣ್ವತೀರ್ಥ(46) ಎಂದು ಗುರುತಿಸಲಾಗಿದೆ.
ಅ.30 ರಂದು ಪಡೀಲ್ ನಲ್ಲಿ ಆಕ್ಟಿವಾ ಮತ್ತು ಟಿಪ್ಪರ್ ನಡುವೆ ಅಪಘಾತ ಸಂಭವಿಸಿದ್ದು, ಅಪಘಾತದಲ್ಲಿ ಗಂಭೀರ ಗಾಯಗೊಂಡ ವಿದ್ಯಾ ರವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿಯಬೇಕಿದೆ.