ಪುತ್ತೂರು: ಮಂಗಳಮುಖಿಯರು ಬಾರ್ ವೊಂದರಲ್ಲಿ ಬಾಗಿಲ ಗಾಜು ಒಡೆದು ದಾಂಧಲೆ ನಡೆಸಿದ ಘಟನೆ ಅ.30 ರಂದು ಮಧ್ಯಾಹ್ನ ಪುತ್ತೂರಿನ ಮಹಿಳಾ ಪೊಲೀಸ್ ಠಾಣೆಯ ಬಳಿಯ ಬಾರ್ & ರೆಸ್ಟೋರೆಂಟ್ ನಲ್ಲಿ ನಡೆದಿದೆ.
ಸುಮಾರು 10 ರಿಂದ 15 ಮಂದಿ ಮಂಗಳ ಮುಖಿಯರು ಬಾರ್ ನಲ್ಲಿ ತಮಗೆ ನೀಡಿದ ದಾನಕ್ಕಿಂತ ಹೆಚ್ಚಿನ ದಾನ ಬೇಡಿಕೆ ನೀಡಿದ್ದು, ನಮಗೆ ಕೊಟ್ಟ ದಾನ ರೂಪದ ಹಣ ಕಡಿಮೆಯಾಗಿದೆ ಎಂದು ಕ್ಯಾಶರ್ ಅನ್ನು ನಿಂಧಿಸಿದಲ್ಲದೇ, ಬಾರ್ ನ ಬಾಗಿಲ ಗಾಜನ್ನು ಹುಡಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಘಟನೆ ತಿಳಿದು ಪೊಲೀಸರು ಸ್ಥಳಕ್ಕೆ ತೆರಳಿದಾಗ ಮಂಗಳಮುಖಿಯರು ಅಲ್ಲಿಂದ ಪರಾರಿಯಾಗಿದ್ದಾರೆ ಎನ್ನಲಾಗಿದೆ.

























