ಬಂಟ್ವಾಳ: ತಾಲೂಕು ವೀರಕಂಭ ಹಾಲು ಉತ್ಪಾದಕರ ಸಹಕಾರ ಸಂಘದ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ವೀರಪ್ಪ ಮೂಲ್ಯ ಬೆತ್ತಸರವು ಅವಿರೋಧವಾಗಿ ಆಯ್ಕೆಯಾದರು.
ಚುನಾವಣಾಧಿಕಾರಿಯಾಗಿ ಸಹಕಾರಿ ಅಭಿವೃದ್ಧಿ ಅಧಿಕಾರಿ ಬಿ ವಿ ಪ್ರತಿಮಾ ಆಯ್ಕೆ ಪ್ರತಿಕ್ರಿಯೆ ನಡೆಸಿದರು.
ಈ ಸಂದರ್ಭದಲ್ಲಿ ಸಂಘದ ನಿರ್ದೇಶಕರುಗಳಾದ ಆನಂದ ಮೂಲ್ಯ ಮೈರ, ಉಮಾವತಿ ಮಜಿ, ಉಮೇಶ್ ಎನ್ ಮಜಿ, ಜಯಶೀಲ ಆಳ್ವ ನಡ್ಚಾಲು, ಪದ್ಮನಾಭ ಗೌಡ ಮೈರ, ಪದ್ಮನಾಭ ಬಂಗೇರ ಮಜಿ, ನಾರಾಯಣ ಮೂಲ್ಯ ಬೆತ್ತಸರವು, ತೇಜಾಕ್ಷಿ ಪಡೀಲ್ ,ಸುನಂದ ನಗ್ರಿ ಮೂಲೆ ಕೆಲಿಂಜ ,ಕೇಶವ ನಾಯ್ಕ ಕೆಮ್ಮಟೆ, ಉಪಸ್ಥಿತರಿದ್ದರು. ಸಂಘದ ಕಾರ್ಯದರ್ಶಿ ಹರೀಶ್ ಬಂಗೇರ ಸಹಕರಿಸಿದರು.