ನೆಟ್‌ಸರ್ಫ್ ಕಮ್ಯುನಿಕೇಶನ್ ಪ್ರೈ. ಲಿ. ನ ಜೈವಿಕ ಕೃಷಿ ತಂತ್ರಜ್ಞಾನ, ನ್ಯಾನೋ ತಂತ್ರಜ್ಞಾನದ ಅಳವಡಿಕೆ ಬಗ್ಗೆ ಮಾಹಿತಿ ಕಾರ್ಯಗಾರ ಜ. 26 ರಂದು ಇರ್ದೆ ಬೆಟ್ಟಂಪಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಭಾಂಗಣದಲ್ಲಿ ನಡೆಯಿತು. ಸಾವಯವ ಕೃಷಿ ಪರಿಣತ ವಿನೂ ಅರಸೀಕೆರೆ ಸಂಪನ್ಮೂಲ ವ್ಯಕ್ತಿಯಾಗಿ ಮಾಹಿತಿ ನೀಡಿದರು.
ದೇವಕುಮಾರ್ ಕೊಕ್ಕಡರವರು ನೆಟ್‌ಸರ್ಫ್ ಉತ್ಪನ್ನಗಳ ಬಗ್ಗೆ ಮಾಹಿತಿ ನೀಡಿದರು. ಪ್ರಗತಿಪರ ಕೃಷಿಕ ಚಂದುಕೂಡ್ಲು ಶ್ರೀನಿವಾಸ ಭಟ್ ದೀಪ ಬೆಳಗಿಸಿದರು. ಜಗನ್ನಾಥ ರೈ ಕೊಮ್ಮಂಡ, ವಿನೋದ್ ರೈ ಗುತ್ತು, ತಾ.ಪಂ.ಸದಸ್ಯ ಹರೀಶ್ ಬಿಜತ್ರೆ, ಶ್ರೀಕೃಷ್ಣ ಭಟ್ ದೇವಸ್ಯ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ರಂಜನ್ ನೆಲ್ಯಾಡಿ, ಕಿರಣ್ ಶಂಕರ್ ರೈ ಮದಕ ಅನಿಸಿಕೆ ವ್ಯಕ್ತಪಡಿಸಿದರು. ನೂರಾರು ಕೃಷಿಕರು ಕಾರ್ಯಗಾರದಲ್ಲಿ ಪಾಲ್ಗೊಂಡರು.