ಪುತ್ತೂರು: ಶೀಘ್ರ ಫಲಿತಾಂಶ ಮತ್ತು ಗುಣಮಟ್ಟದ ಸೇವೆಯ ಮೂಲಕ ಜನತೆಯ ವಿಶ್ವಾಸ ಗಳಿಸಿಕೊಂಡಿರುವ ‘ವಿ ಕೇರ್’ ಲ್ಯಾಬೊರೇಟರೀಸ್ ನ ಎರಡನೇ ಶಾಖೆಯು ನ.3 ರಂದು ಪುತ್ತೂರಿನ ಕಲ್ಲಾರೆ ಮುಖ್ಯ ರಸ್ತೆಯ ಶ್ರೀನಿವಾಸ ಪ್ಲಾಝಾದಲ್ಲಿ ಶುಭಾರಂಭಗೊಳ್ಳಲಿದೆ.
ಮುಖ್ಯ ಅತಿಥಿಗಳಾಗಿ ಸೈಯ್ಯದ್ ಅಹ್ಮದ್ ಫಕೋಯ ತಂಙಳ್, ಶಾಸಕರಾದ ಸಂಜೀವ ಮಠಂದೂರು, ಸಹಾಯಕ ಆಯುಕ್ತರಾದ ಡಾ. ಯತೀಶ್ ಉಳ್ಳಾಲ್, ನಗರಸಭಾಧ್ಯಕ್ಷ ಕೆ. ಜೀವಂಧರ್ ಜೈನ್, ಪೌರಾಯುಕ್ತ ಮಧು ಎಸ್.ಮನೋಹರ್, ತಹಶೀಲ್ದಾರ್ ಟಿ. ರಮೇಶ್ ಬಾಬು, ಮಾಜಿ ಶಾಸಕರಾದ ಶಕುಂತಳಾ ಶೆಟ್ಟಿ, ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಮುಳಿಯ ಕೇಶವ ಪ್ರಸಾದ್, ನಗರಸಭಾ ಸದಸ್ಯ ಮನೋಹರ್ ಕಲ್ಲಾರೆ, ತಾಲೂಕು ಆರೋಗ್ಯಾಧಿಕಾರಿ ಡಾ. ದೀಪಕ್ ರೈ, ಎಸ್‌ಡಿಪಿಐ ವಿಧಾನಸಭಾ ಕ್ಷೇತ್ರಾಧ್ಯಕ್ಷ ಇಬ್ರಾಹಿಂ ಸಾಗರ್, ಫಿಲೋಮಿನಾ ಪಿಯು ಕಾಲೇಜು ಪ್ರಾಂಶುಪಾಲ ರೆ.ಫಾ. ವಿಜಯ್ ಲೋಬೋ, ದಾವೂದ್ ಕೋಡಿಂಬಾಡಿ ಆಗಮಿಸಲಿದ್ದಾರೆ.
ಒಳತ್ತಡ್ಕದ ಉದ್ಯಮಿ ನವಾಬ್ ಮಾಲಕತ್ವದಲ್ಲಿ ‘ರಿಸಲ್ಟ್ ಯು ಕ್ಯಾನ್ ಬಿಲೀವ್ ಇನ್’ ಎನ್ನುವ ಸೋಗನ್ ನೊಂದಿಗೆ ಕಾರ್ಯಾಚರಿಸುತ್ತಿರುವ ‘ಐ ಕೇರ್’ ಲ್ಯಾಬೊರೇಟರೀಸ್’ನ ಪ್ರಥಮ ಶಾಖೆಯು ಕಳೆದ 2 ವರ್ಷಗಳಿಂದ ವಿಟ್ಲದ ಮೋತಿ ಸಿಟಿ ಕಾಂಪ್ಲೆಕ್ಸ್ ನಲ್ಲಿ ಕಾರ್ಯಾಚರಿಸುತ್ತಿದೆ.
ರಕ್ತ,ಮೂತ್ರ, ಮಲ, ಕಫದ ಮಾದರಿಗಳ 500ಕ್ಕೂ ಹೆಚ್ಚು ವಿಧದ ತಪಾಸಣಾ ಸೌಲಭ್ಯಗಳನ್ನು ಒದಗಿಸುತ್ತಿದೆ. ಇದಕ್ಕಾಗಿ ವಿದೇಶಗಳಿಂದ ಆಮದು ಮಾಡಿಕೊಳ್ಳಲಾದ ಅತ್ಯಾಧುನಿಕ, ಸುಸಜ್ಜಿತ ಯಂತ್ರೋಪಕರಣಗಳನ್ನು ಲ್ಯಾಬ್ ಹೊಂದಿದೆ. ಕಂಪ್ಲೀಟ್ ಬ್ಲಡ್ ಸೆಲ್ ಕೌಂಟ್ ಮಾಡುವಂತಹ ಜಪಾನ್‌ನಿಂದ ಆಮದಿತ 5-ಪಾರ್ಟ್ ಹೆಮಟಾಲಜಿ ಅನಲೈಸರ್, ಥೈರಾಯ್, ಫರ್ಟಿಲಿಟಿ ಹಾರ್ಮೊನ್, ವಿಟಮಿನ್ ಡಿ ಟೋಟಲ್, ಟೋಟಲ್ ಐಜಿಲ್ಲ ಲೆವೆಲ್, ಎಸ್.ಘಂಟಿನ್, ಆಂಟಿ ಟಿಪಿಒ ಆಂಟಿಬಾಡೀಸ್‌ಗಳನ್ನು ತಪಾಸಣೆ ಮಾಡುವಂತಹ ಇಟಲಿಯಿಂದ ಆಮದಿತ ಹಾರ್ಮೊನ್ಸ್ ಇಮೂನೋಸ್ಸೇ ಮೆಷಿನ್, ಜಪಾನ್‌ನಿಂದ ಆಮದು ಮಾಡಿಕೊಳ್ಳಲಾದ ಎಲಕ್ಟೋಸೈಟ್ ಸೆಡಿಮೆಂಟೇಷನ್ ರೇಟ್ ತಿಳಿಯುವ ಇಎಸ್‌ಆರ್ ಅನಲೈಸರ್, ಎಲಕ್ಟೋಲೈಟ್ ಅನಲೈಸರ್, ನೆಲ್ಯೂಲೈಸರ್, ಯುರೋಪ್‌ನ
ನಾರ್ವೆಯಿಂದ ತರಿಸಿದ ಬೃಡ್ ಶುಗರ್ ಲೆವೆಲ್ ತಿಳಿಯುವ ಅಬೋಟ್ ಪೆಬಿಸಿ ಮಷಿನ್, ಲಿವರ್ ಮತ್ತು ಕಿಡ್ನಿಯ ಲಿಪಿಡ್ ಪ್ರೊಫೈಲ್ ತಿಳಿಯುವ ಬಯೋಕೆಮಿಸ್ಟ್ರಿ ಮಷಿನ್ ಮತ್ತು ಫ್ರೀ ಚಾನೆಲ್ ಇಸಿಜಿ ರೆಕಾರ್ಡರ್ ಇತ್ಯಾದಿ ವ್ಯವಸ್ಥೆಗಳನ್ನು ‘ಐ ಕೇರ್’ ಲ್ಯಾಬೊರೇಟರೀಸ್’ ಹೊಂದಿದೆ.
ಗ್ರಾಹಕರ ಅನುಕೂಲಕ್ಕಾಗಿ ಸಂಸ್ಥೆಯಲ್ಲಿ ವಿವಿಧ ರಕ್ತಪರೀಕ್ಷಾ ಪ್ಯಾಕೇಜ್‌ಗಳು ಲಭ್ಯವಿದೆ. ಜೊತೆಗೆ ತಪಾಸಣೆ ಮಾಡಿದ ರಿಪೋರ್ಟ್ ಗಳು ಎಸ್ ಎಂಎಸ್ ಅಲರ್ಟ್ ಮತ್ತು ಇಮೇಲ್ ಮೂಲಕವೂ ಲಭಿಸಲಿದೆ. ಬೆಳಗ್ಗೆ 6 ಗಂಟೆಯಿಂದ ರಾತ್ರಿ 8.30ರವರೆಗೆ ಲ್ಯಾಬ್ ಕಾರ್ಯಾಚರಿಸಲಿದೆ. ಅಲ್ಲದೇ ಉಚಿತ ಬ್ಲಡ್ ಶುಗರ್ ಮತ್ತು ಬಿಪಿ ಪರೀಕ್ಷೆಯನ್ನು ಕೂಡ ಸಂಸ್ಥೆಯು ಉಚಿತವಾಗಿ ಮಾಡಿಕೊಡಲಿದೆ. ಅಪಾಯಿಂಟ್‌ಮೆಂಟ್ ಮತ್ತು ಮನೆಯಿಂದಲೇ ಸ್ಯಾಂಪಲ್ ಕಲೆಕ್ಷನ್ ಮಾಡಿಕೊಳ್ಳುವ ವ್ಯವಸ್ಥೆಯೂ ಇಲ್ಲಿದೆ. ಇದೀಗ ಶುಭಾರಂಭದ ಪ್ರಯುಕ್ತ ಕೊಡುಗೆಯಾಗಿ ಎಲ್ಲಾ ಬಗೆಯ ಟೆಸ್ಟ್ ಗಳ ಮೇಲೆ 25% ರಿಯಾಯಿತಿ ಲಭಿಸಲಿದೆ. ಹೆಚ್ಚಿನ ಮಾಹಿತಿಗೆ ಮೊ.ಸಂ.: 6363695272 ಅನ್ನು ಸಂಪರ್ಕಿಸಬಹುದಾಗಿದೆ.