ಪುತ್ತೂರಿನಲ್ಲಿ ಹೋಲ್ ಸೇಲ್ ಮತ್ತು ರಿಟೇಲ್ ಮಳಿಗೆ ‘ಸ್ಮಾರ್ಟ್ ರೂಟ್’ ಟೆಕ್ನಾಲಜೀಸ್ ನ. 4 ರಂದು ಪುತ್ತೂರಿನ ಸಿಟಿ ಸೆಂಟರ್ ಬ್ಯುಲ್ಡಿಂಗ್ ನ ಗ್ರೌಂಡ್ ಫ್ಲೋರ್ ನಲ್ಲಿ ಶುಭಾರಂಭಗೊಳ್ಳಲಿದೆ.
ಅಲ್ ಇಹ್ಸನ್ ವಿದ್ಯಾಸಂಸ್ಥೆ ಮೂಳೂರಿನ ಸಂಚಾಲಕರಾದ ಅಸ್ಸಯ್ಯದ್ ಕೆ ಎಸ್ ಆಟಕೋಯ ತಂಙಳ್ ಕುಂಬೊಲ್ ಮಳಿಗೆಗೆ ಚಾಲನೆ ನೀಡಲಿದ್ದು, ಶಾಸಕ ಸಂಜೀವ ಮಠಂದೂರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಪುತ್ತೂರು ನಗರ ಸಭಾ ಅಧ್ಯಕ್ಷ ಜೀವಂಧರ್ ಜೈನ್, ಹೇಮನಾಥ ಶೆಟ್ಟಿ ಕಾವು, ಒಳಮೊಗ್ರು ಗ್ರಾಮ ಪಂಚಾಯಿತಿಯ ಅಬ್ದುಲ್ ರಹಿಮಾನ್ ಅರಿಯಡ್ಕ, ಬೆಳ್ಳಾರೆ ಗ್ರಾಮ ಪಂಚಾಯಿತಿ ಸದಸ್ಯ ಇಕ್ಬಾಲ್ ಬೆಳ್ಳಾರೆ ಸೇರಿದಂತೆ ಹಲವು ಗಣ್ಯರು ಪಾಲ್ಗೊಳ್ಳಲಿದ್ದಾರೆ.
ಸೋಲಾರ್ ಇನ್ವರ್ಟರ್, ಸೋಲಾರ್ ವಾಟರ್ ಹೀಟರ್, ಸೋಲಾರ್ ಬೀದಿ ದೀಪಗಳು ಮತ್ತು ಗಾರ್ಡನ್ ದೀಪಗಳು, ಇಲೆಕ್ಟ್ರಿಕಲ್ ಗೀಸರ್, ಬ್ಯಾಟರಿ ರಹಿತ ಸೋಲಾರ್ ವಿದ್ಯುತ್ ಸ್ಥಾವರ, ಬ್ಯಾಟರಿ ಸಹಿತ ಸೋಲಾರ್ ವಿದ್ಯುತ್ ಸ್ಥಾವರ, ಸೆಕ್ಯುರಿಟಿ ಸಿಸ್ಟಂಗಳಾದ ಸಿಸಿ ಟಿವಿ ಕ್ಯಾಮೆರಾ ಇನ್ಸ್ಟಾಲೇಶನ್ ಮತ್ತು ಸರ್ವಿಸ್, ಸೋಲಾರ್ ಕ್ಯಾಮೆರಾ, ಸಿಸಿ ಟಿವಿ ವೈಫೈ ಕ್ಯಾಮೆರಾ ಮತ್ತು 4ಜಿ ಸಿಮ್ ಕ್ಯಾಮೆರಾ, ಬಯೋಮೆಟ್ರಿಕ್ ಹಾಜರಾತಿ ಮೆಷಿನ್, ಆಟೋಮ್ಯಾಟಿಕ್ ಗೇಟ್ಸ್, ಇಂಟರ್ಕೋಮ್ ಟೆಲಿಫೋನ್ ಸಿಸ್ಟಂ, ಜಿಪಿಎಸ್ ವೆಹಿಕಲ್ ಟ್ರಾಕಿಂಗ್ ಸಿಸ್ಟಂ ಜತೆ ಹಲವು ಸೌಲಭ್ಯಗಳನ್ನು ಪಡೆಯಬಹುದಾಗಿದೆ ಎಂದು ಸಂಸ್ಥೆಯ ಮಾಲಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.