ಬಂಟ್ವಾಳ: ಮಹತೊಭಾರ ಶ್ರೀ ಕಾರಿಂಜೇಶ್ವರ ದೇವಸ್ಥಾನದಲ್ಲಿ ಕಿಡಿಗೇಡಿಗಳು ಅಕ್ರಮವಾಗಿ ಚಪ್ಪಲಿ ಹಾಕಿ ಪ್ರವೇಶಿಸಿ ಹಿಂದೂಗಳ ಭಾವನೆಗಳಿಗೆ ದಕ್ಕೆ ತಂದಿದ್ದು, ಅಲ್ಲದೆ ಅದನ್ನು ದೇವಸ್ಥಾನದಲ್ಲಿ ಚಪ್ಪಲಿ ಹಾಕಿ ನಡೆದಾಡುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ವಿಜ್ರಂಭಿಸಿ ಹಿಂದೂಗಳ ಧಾರ್ಮಿಕ ನಂಬಿಕೆಗೂ ಧಕ್ಕೆ ತಂದಿದ್ದು, ಇದನ್ನು ದೇವಸ್ಥಾನದ ಆಡಳಿತ ಮಂಡಳಿ ತೀವ್ರವಾಗಿ ಖಂಡಿಸಿದ್ದು, ಆರೋಪಿಗಳನ್ನು ಶೀಘ್ರ ಬಂಧಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಪುಂಜಾಲಕಟ್ಟೆ ಠಾಣೆಗೆ ಮನವಿ ನೀಡಿದರು.
ಈ ಸಂದರ್ಭದಲ್ಲಿ ದೇವಸ್ಥಾನದ ಗ್ರಾಮಣಿ ವೆಂಕಟ್ರಮಣ ಮುಚ್ಚಿನ್ನಾಯ, ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಪ್ರವೀಣಾ ಪೂಜಾರಿ ಪಡಂತ್ರ್ಯಬೆಟ್ಟು, ಕಾವಳ ಮೂಡುರು ಗ್ರಾಮ ಪಂಚಾಯತ್ ಉಪಾಧ್ಯಕ್ಷರು, ಅಜಿತ್ ಶೆಟ್ಟಿ ಕಾರಿಂಜ,
ದೇವಸ್ಥಾನದ ಮ್ಯಾನೇಜರ್ ವಿನಯ ಕುಮಾರ್ ಎ,
ಶರ್ಮಿತ್ ಜೈನ್ ಕಾರಿಂಜ ಉಪಸ್ತಿತರಿದ್ದರು.



























