ಬೆಂಗಳೂರು: ವೇಶ್ಯೆಯರ ಜೊತೆ ಪತಿ ಚಾಟಿಂಗ್ ಚಟ ಪ್ರಶ್ನಿಸಿದ್ದಕ್ಕೆ ಕಿರುಕುಳ ನೀಡಿದ ಪತಿಯ ವಿರುದ್ಧ ಪತ್ನಿ ಕೋರ್ಟ್ನಲ್ಲಿ ಖಾಸಗಿ ದೂರು ದಾಖಲಿಸಿದ ಘಟನೆ ಬಸವನಗುಡಿಯಲ್ಲಿ ವರದಿಯಾಗಿದೆ.
ವೇಶ್ಯೆಯರ ಜೊತೆ ಪತಿ ಚಾಟಿಂಗ್ ಮಾಡೋದನ್ನ ಪ್ರಶ್ನಿಸಿದ್ದಕ್ಕೆ ಪತಿ ಪತ್ನಿಗೆ ಕಿರುಕುಳ ನೀಡ್ತಿದ್ದ ಎಂಬ ಆರೋಪ ಕೇಳಿ ಬಂದಿದ್ದು ಬೇಸತ್ತ ಪತ್ನಿ 1ನೇ ಹೆಚ್ಚುವರಿ ಮ್ಯಾಜಿಸ್ಟ್ರೇಟ್ ಕೋರ್ಟ್ ನಲ್ಲಿ ಪಿಸಿಆರ್ ದಾಖಲು ಮಾಡಿದ್ದಾಳೆ. ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ಆರೋಪಿ ಪತಿ ಮೇಲೆ ಎಫ್ಐಆರ್ ದಾಖಲಿಸುವಂತೆ ಬಸವನಗುಡಿ ಮಹಿಳಾ ಪೊಲೀಸ್ ಠಾಣೆಗೆ ನಿರ್ದೇಶಿಸಿದೆ.
ಏನಿದು ಪ್ರಕರಣ..?
ಆರೋಪಿ ಶ್ರೀನಿವಾಸ ವೈದ್ಯ ಎಂಬಾತ ಪ್ರತಿದಿನ ಅಶ್ಲೀಲ ವಿಡಿಯೋದಲ್ಲಿನ ವೇಶ್ಯೆಯರ ಜತೆ ಮಾತುಕತೆ ನಡೆಸಿ ಚಾಟಿಂಗ್ ಮಾಡುತ್ತಿದ್ದ ಎಂದು ಪತ್ನಿ ಆರೋಪಿಸಿದ್ದಾಳೆ. ಪತಿ ಪೋರ್ನ್ ವೆಬ್ ಸೈಟ್ ಚಟಕ್ಕೆ ಬಿದ್ದಿದ್ದಾರೆ ಮೊಬೈಲ್ ನಲ್ಲಿ ಚಾಟ್ ಮಾಡುವ ಮೂಲಕ ನಿರಂತರ ಸಂಪರ್ಕ ಹೊಂದಿದ್ದಾರೆ. ಆ ಮೂಲಕ ತನ್ನನ್ನು ತಿರಸ್ಕರಿಸುತ್ತಿದ್ದಾರೆ ಇದನ್ನು ಪ್ರಶ್ನಿಸಿದ್ದಕ್ಕೆ ತನ್ನ ಮೇಲೆ ಹಲ್ಲೆ ಮಾಡಿ ಕಿರುಕುಳ ನೀಡಿದ್ದಾಗಿ ಪತ್ನಿ ಆರೋಪಿಸಿದ್ದಾಳೆ.
ಕೇಸ್ ದಾಖಲಿಸಿಕೊಳ್ಳು ನಿರಾಕರಿಸಿದ ಪೊಲೀಸರು:
ಪತಿಯ ವಿರುದ್ಧ ದೂರು ದಾಖಲಿಸಲು ತೀರ್ಮಾನಿಸಿದ ಪತ್ನಿನ ಈ ಬಗ್ಗೆ ಬಸವನಗುಡಿ ಮಹಿಳಾ ಠಾಣೆಗೆ ಹೋಗಿದ್ದಾರೆ. ಕೇವಲ ಚಾಟಿಂಗ್ & ಪೋರ್ನ್ ನೋಡಿದ್ರೆ ಕೇಸ್ ದಾಖಲಿಸಿಕೊಳ್ಳಲು ಆಗೋಲ್ಲ ಎಂದು ಪೊಲೀಸರು ದೂರು ತಿರಸ್ಕಾರ ಮಾಡಿದ್ದಾರೆ ಎನ್ನಲಾಗಿದೆ. ಬಳಿಕ ಕೋರ್ಟ್ ಮೊರೆ ಹೋದ ಪತ್ನಿ ಪತಿ ವಿರುದ್ದ ಪಿಸಿಆರ್ ದಾಖಲು ಮಾಡಿದ್ದಾರೆ. ಸದ್ಯ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ಕೇಸ್ ದಾಖಲಿಸಿ ಎಫ್ಐಆರ್ ಮಾಡಿ ತನಿಖೆ ನಡೆಸುವಂತೆ ಸೂಚಿಸಿದೆ. ಕೋರ್ಟ್ ಸೂಚನೆ ಬಳಿಕ ಪತಿರಾಯ ನಾಪತ್ತೆಯಾಗಿದ್ದಾನೆ.
ಪೋನ್ ಸೈಟ್ ಕನ್ಯೆಯರ ಭೇಟಿ ಮಾಡಲು ಶುರು ಹಚ್ಚಿಕೊಂಡಿದ್ದ ತುಂಟ ಪತಿ:
ಮೊದಮೊದಲು ಪೋರ್ನ್ ನೋಡುತ್ತಿದ್ದ ಆರೋಪಿ ಅದಾದ ಬಳಿಕ ಅಶ್ಲೀಲ ವೆಬ್ಸೈಟ್ಗಳ ಹುಡುಗಿಯರ ಜೊತೆ ಲೈವ್ ವಿಡಿಯೋ ಚಟಕ್ಕೆ ಬಿದ್ದಿದ್ದನಂತೆ. ಬರ ಬರುತ್ತಾ ಸಂಪೂರ್ಣ ಲೈವ್ ವಿಡಿಯೋ ಕಾಲ್ಗಳಲ್ಲಿ ಮುಳುಗಿಬಿಟ್ಟದ್ದನಂತೆ. ಈ ಕುರಿತು ಅನೇಕ ಬಾರಿ ಬುದ್ದಿವಾದ ಹೇಳಿದ್ರೂ ಪತಿ ಡೋಂಟ್ಕೇರ್ ಅಂದಿದ್ದನಂತೆ.
ಅಷ್ಟೇ ಅಲ್ಲದೆ ಒಂದು ಹೆಜ್ಜೆ ಮುಂದು ಹೋಗಿದ್ದ ಆರೋಪಿ ವಿನಾಯಕ ಹಲವಾರು ಅಶ್ಲೀಲ ವೆಬ್ಸೈಟ್ಗಳ ಚಂದಾದಾರಿಕೆಯನ್ನು ಸಹ ಪಡೆದುಕೊಂಡಿದ್ದನಮತೆ . ಅದರ ಜೊತೆಗೆ ತನ್ನೊಡನೆ ಇರುವ ಕೆಲವು ಪೋಟೋಗಳನ್ನ ಕೂಡ ಅದರಲ್ಲಿ ಶೇರ್ ಮಾಡ್ತಿದ್ದ ಎಂದು ಪತ್ನಿ ಗಂಭಿರ ಆರೋಪ ಮಾಡಿದ್ದಾಳೆ ಇದಕ್ಕಾಗಿ ಸಾಕಷ್ಟು ಹಣವನ್ನು ಹಾಳು ಮಾಡಿದ್ದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಇನ್ನು ವಿಡೀಯೋ ಚಟಕ್ಕೆ ಬಿದ್ದು ಪತ್ನಿಯನ್ನು ತಿರಸ್ಕಾರ ಮಾಡಿದ್ದ ಪತಿರಾಯ ವಿಡಿಯೋ ಚಾಟಿಂಗ್ ನಲ್ಲಿದ್ದವರನ್ನು ನೇರವಾಗಿ ಭೇಟಿ ಮಾಡಲು ಶುರುಮಾಡಿದ್ದನಂತೆ. ಬಳಿಕ ನಾನು ವಿಚ್ಛೇದಿತ ಅಂತಾ ಅಕೌಂಟ್ ತೆರೆದುಕೊಂಡು ಅನೇಕ ಪೋರ್ನ್ ಸೈಟ್ ನಲ್ಲಿ ಪ್ರೋಫೈಲ್ ಕ್ರಿಯೇಟ್ ಮಾಡಿಕೊಂಡಿದ್ದ. ಜೊತೆಗೆ ಮ್ಯಾಟ್ರಿಮೊನಿಯಲ್ ವೆಬ್ ಸೈಟ್ ನಲ್ಲೂ ಪ್ರೋಫೈಲ್ ತೆರೆದಿದ್ದನಂತೆ.