ಉಪ್ಪಿನಂಗಡಿ: ಪಂಚಾಯತ್ ರಸ್ತೆ ನಿರ್ಮಾಣಕ್ಕೆ ಅಡ್ಡಿ ಪಡಿಸಿದರು ಎಂದು ತಂಡವೊಂದು ಮನೆಗೆ ನುಗ್ಗಿ ಹಲ್ಲೆ ನಡೆಸಿದೆ ಎಂದು ಆರೋಪಿಸಿ ವ್ಯಕ್ತಿಯೊಬ್ಬರು ಠಾಣೆಗೆ ದೂರು ನೀಡಿದ ಘಟನೆ ಕಡಬ ತಾಲೂಕಿನ ಶಿರಾಡಿ ಗ್ರಾಮದ ಪೇರಮಜಲು ಎಂಬಲ್ಲಿ ನಡೆದಿದೆ.
ಕಡಬ ತಾಲೂಕಿನ ಶಿರಾಡಿ ಗ್ರಾಮದ ಪೇರಮಜಲು ನಿವಾಸಿ ಬಾಬು ದೂರುದಾರರು.
ಪೌಲೋಸ್,ಎಲ್ದೊ,ಜೋಯಿ,ವಸಂತ,ದೇವಪ್ಪ, ತನಿಯಪ್ಪ,ಕರಿಯ, ಶರತ್,ಸೋಮಪ್ಪ ಎಂಬವರ ವಿರುದ್ಧ ದೂರು ನೀಡಲಾಗಿದೆ.
ಬಾಬು ರವರ ಪಟ್ಟ ಜಾಗದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣ ನಿರ್ಮಿಸುವ ಬಗ್ಗೆ ಶಿರಾಡಿ ಪಂಚಾಯತ್ ನಿರ್ಣಯಿಸಿದ್ದು, ಸದ್ರಿ ರಸ್ತೆಗೆ ಸಂಬಂಧಿಸಿದಂತೆ ಬಾಬು ರವರು ಮಾಹಿತಿ ಹಕ್ಕಿನಲ್ಲಿ ಕೇಳಿದ ಮಾಹಿತಿಗೆ ಪಂಚಾಯತ್ ನವರು ಸರಿಯಾದ ಉತ್ತರವನ್ನು ನೀಡದೆ ಇದ್ದು, ನ.3 ರಂದು ಏಕಾಏಕಿಯಾಗಿ ರಸ್ತೆ ಕಾಮಗಾರಿ ನಡೆಸುತ್ತಿರುವುದನ್ನು ಕಂಡ ಬಾಬು ಹಾಗೂ ಮನೆಯವರು ಆಕ್ಷೇಪಿಸಿದ್ದು,ಈ ಸಂದರ್ಭದಲ್ಲಿ ಪೌಲೋಸ್, ಎಲ್ದೊ, ಜೋಯಿ, ವಸಂತ, ದೇವಪ್ಪ, ತನಿಯಪ್ಪ,ಕರಿಯ, ಶರತ್,ಸೋಮಪ್ಪ ಎಂಬವರು ಬಾಬು ರವರ ಮನೆಗೆ ನುಗ್ಗಿ ಬಾಬು ಹಾಗೂ ಮನೆಯವರಿಗೆ ಅವಾಚ್ಯ ಶಬ್ಧಗಳಿಂದ ಬೈದು, ಹಲ್ಲೆ ನಡೆಸಿದ್ದು, ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಉಪ್ಪಿನಂಗಡಿ ಠಾಣೆಯಲ್ಲಿ ಅ.ಕ್ರ. 126/2021 ಕಲಂ: 143,147,448,323,504,509B/w, 149 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.



























