ಮೂಡುಬಿದಿರೆ: ಕಳೆದ ಮೂರು ದಿನಗಳ ಹಿಂದೆ ವಿವಾಹಿತ ಮಹಿಳೆಯೊಬ್ಬಳು ಯುವಕನೊಂದಿಗೆ ನಾಪತ್ತೆಯಾಗಿದ್ದು, ಇಂದು ಆಕೆ ಯುವಕನೊಂದಿಗೆ ಪತ್ತೆಯಾಗಿದ್ದಾಳೆ. ಯುವಕನ ವಿರುದ್ಧ ಮೂಡುಬಿದಿರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾರ್ಕಳ ತಾಲೂಕಿನ ಶಿರ್ಲಾಲಿನ ವಿವಾಹಿತೆ ಅಶ್ವಿನಿ (28) ಎಂಬಾಕೆ. ಮೂರು ದಿನಗಳ ಹಿಂದೆ ಮೂಡುಬಿದಿರೆ ತಾಲೂಕಿನ ಬೆಳುವಾಯಿಯಲ್ಲಿರುವ ತಮ್ಮ ಮನೆಗೆ ಬಂದಿದ್ದು,ಈ ವೇಳೆ ತನ್ನ ಜೊತೆಗೆ ಒಂದೂವರೆ ವರ್ಷದ ಮಗುವಿನೊಂದಿಗೆ ಶಿರ್ಲಾಲಿನ ಸಂದೀಪ್ ಆಚಾರ್ಯ ಎಂಬಾತನೊಂದಿಗೆ ಪರಾರಿಯಾಗಿದ್ದಳು ಎನ್ನಲಾಗಿದೆ.
ಸದ್ಯ ಇಬ್ಬರನ್ನು ಪತ್ತೆ ಹಚ್ಚಿರುವ ಪೊಲೀಸರು ಯುವಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.ಗಂಡನ ಮನೆಗೆ ಹೋಗಲು ಒಪ್ಪದ ಮಹಿಳೆಯನ್ನು ಪ್ರಜ್ಞಾ ಕೌನ್ಸಿಲಿಂಗ್ ಕೇಂದ್ರಕ್ಕೆ ಸೇರಿಸಲಾಗಿದೆ.
ನ.1ರಂದು ಅಶ್ವಿನಿ (28) ಎಂಬಾಕೆ ನಾಪತ್ತೆಯಾಗಿದ್ದಾಳೆಂದು ಆಕೆಯ ತಮ್ಮ ಅಶ್ವತ್ ಮೂಡುಬಿದಿರೆ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದನು.
ಈಕೆಯನ್ನು 7 ವರ್ಷದ ಹಿಂದೆ ಕಾರ್ಕಳ ಶಿರ್ವಾಲು ಎಂಬಲ್ಲಿನ ನಿವಾಸಿ ಹರೀಶ ಎಂಬುವರಿಗೆ ವಿವಾಹ ಮಾಡಿಕೊಟ್ಟಿದ್ದಾರೆ. ಅವರಿಗೆ ಹಿತ ಎಂಬ ಒಂದೂವರೆ ವರ್ಷದ ಹೆಣ್ಣು ಮಗು ಇದೆ. ಆದರೆ ಅಶ್ವಿನಿ ಹಾಗೂ ಗಂಡ ಹರೀಶ ಎಂಬುವರಿಗೆ ಸಣ್ಣ – ಪುಟ್ಟ ವಿಷಯಗಳಲ್ಲಿ ಜಗಳವಾಗುತ್ತಿದ್ದು,
ಇದೇ ವಿಚಾರವಾಗಿ ನೊಂದು ಅಶ್ವಿನಿ 2 ವಾರಗಳ ಹಿಂದೆ ತವರು ಮನೆಗೆ ಮಗುವಿನೊಂದಿಗೆ ಬಂದಿದ್ದಳು
ನ.1 ರಂದು ಸಂಜೆ 05-45 ಗಂಟೆಗೆ ತವರು ಮನೆಯಿಂದ ಯಾರಿಗೂ ತಿಳಿಸದೇ ತನ್ನ ಮಗುವನ್ನು ಕರೆದುಕೊಂಡು ಹೋಗಿರುತ್ತಾಳೆ ಎಂದು ದೂರು ದಾಖಲಿಸಿದ್ದನು.