ಪುತ್ತೂರು: ಶ್ರೀಯುತ ಅನೀಶ್ ಪಿ ವಿ ಮಾಲಕತ್ವದ ಆನ್ ಐಡಿಯಾ ಟೆಕ್ ಹಾಗೂ ಸಿನರ್ಜಿ ಪುತ್ತೂರು ಕಚೇರಿ ನವೆಂಬರ್ 5ರಂದು ಪುತ್ತೂರು – ದರ್ಬೆ, ಬೈಪಾಸ್ ಜಂಕ್ಷನ್ ಬಳಿ ಟೋಟಲ್ ಗ್ಯಾಸ್ ಹತ್ತಿರವಿರುವ ಆನಾಜೆ ಅಮ್ಮು ರೈ ಕಾಂಪ್ಲೆಕ್ಸ್’ನ ನೆಲಮಹಡಿಗೆ ಸ್ಥಳಾಂತರಗೊಂಡು ಶುಭಾರಂಭಗೊಂಡಿತು.
ಲಕ್ಷ್ಮಿ ಪೂಜೆಯಿಂದ ಪ್ರಾರಂಭಗೊಂಡ ಕಾರ್ಯಕ್ರಮ ಮುಂದುವರಿದು ನೆಟ್ಸರ್ಫ್ ನೆಟವರ್ಕ್’ನ ಕ್ಲಸ್ಟರ್ ಹೆಡ್ ಹಾಗು ಸಿನರ್ಜಿ ತಂಡದ ಬ್ಯುಸಿನೆಸ್ ಅಸೋಸಿಯೇಟ್ ಆಗಿರುವ ಶ್ರೀಯುತ ಗಿರೀಶ್’ರವರು ಮಾತನಾಡಿ ದೀಪಾವಳಿಯ ಶುಭದಿನದಂದು ಆರಂಭಗೊಂಡ ಈ ಸಂಸ್ಥೆಯು ದೀಪದಂತೆ ಬೆಳಗಿ ಏಳಿಗೆಯನ್ನು ಕಾಣಲಿ ಎಂದು ಶುಭ ಹಾರೈಸಿದರು.
ಕಟ್ಟಡದ ಮಾಲಕರಾದ ಬಾಲಕೃಷ್ಣ ರೈ ಆನಾಜೆ, ಸುಳ್ಯ ನೆಟ್ಸರ್ಫ್ ಸ್ಟಾಕ್ ಪಾಯಿಂಟ್’ನ ಮಾಲಕರಾದ ರಮಾನಾಥ ಕಾನತ್ತಿಲ, ತಾಯಿ ಜಯಲಕ್ಷ್ಮಿ ಎನ್, ಚಿಕ್ಕಪ್ಪ ಚಿಕ್ಕಮ ಅನಂತರಾಮ್ ಕಾರಂತ ಹಾಗು ಕೃಷ್ಣವೇಣಿ ಎನ್ ಎಸ್,
ಬಂಧುಗಳಾದ ಕೊಚ್ಚಿ ಗಣಪತಿ ಭಟ್ ದೀಪಜ್ವಲಿಸಿ ಉದ್ಘಾಟಿಸಿದರು.
ಶ್ರೀಯುತ ರಮಾನಾಥ ಕಾನತ್ತಿಲ ಇವರು ಸಂಸ್ಥೆಯ ಹಾಗು ಮಾಲಕರ ಸರ್ವತೋಮುಖ ಅಭಿವೃದ್ಧಿ ಹಾಗೂ ಬಿಸಿನೆಸ್ ಡೆವಲಪ್ಮೆಂಟ್ ಬಗ್ಗೆ ಮಾತನಾಡಿ ಶುಭ ಹಾರೈಸಿದರು. ಮಾಲಕರ ಚಿಕ್ಕಮ್ಮ ಶ್ರೀಮತಿ ಕೃಷ್ಣವೇಣಿ ಎಂ.ಎಸ್ ಇವರು ಕಾರ್ಯಕ್ರಮವನ್ನು ನಿರೂಪಿಸಿದರು.
ಸ್ಥಳಾಂತರಗೊಂಡು ಶುಭಾರಂಭಗೊಂಡ ಈ ಕಾರ್ಯಕ್ರಮದ ಯಶಸ್ಸಿಗೆ ಕಾರಣಿಭೂತರಾದ ಶಿವರಾಮ, ಶರತ್, ಜಯಪ್ರಸಾದ್ ನಾಯಕ್, ಅನ್ನಪೂರ್ಣ ಶರ್ಮ, ಗಗನ್ ದೀಪ್ ಬಂಗಾರಡ್ಕ ಇವರು ತೆರೆಮರೆಯಲ್ಲಿದ್ದು ಸಹಕರಿಸಿದರು ಎಂದು ಸಂಸ್ಥೆಯ ಮಾಲೀಕ ಅನೀಶ್ ಪಿ.ವಿ ಸ್ಮರಿಸಿದರು.ಈ ಸಂದರ್ಭದಲ್ಲಿ ಆನ್ ಐಡಿಯ ಟೆಕ್ ಸಂಸ್ಥೆ ಗ್ರಾಹಕರು ನೆಟ್ಸರ್ಫ್ ಸಂಸ್ಥೆಯ ಬಿಸಿನೆಸ್ ಅಸೋಸಿಯೇಟ್’ಗಳು ಎಲ್ಲರು ಕಾರ್ಯಕ್ರಮದಲ್ಲಿ ಬಾಗಿಯಾಗಿ ಕಾರ್ಯಕ್ರಮದ ಯಶಸ್ಸಿನಲ್ಲಿ ಭಾಜನರಾದರು.
ಆನ್ ಐಡಿಯ ಟೆಕ್ ಸಂಸ್ಥೆಯ ಸೇವೆಗಳು:
ರಿಫರ್ಬಿಷ್ಡ್ ಲ್ಯಾಪ್ಟಾಪ್ ಮತ್ತು ಕಂಪ್ಯೂಟರ್ಗಳು.
ಸಿಸಿಟಿವಿ ಅಳವಡಿಕೆ ಮತ್ತು ನಿರ್ವಹಣೆ.
ಬಿಲ್ಲಿಂಗ್ ಸಾಫ್ಟ್ವೇರ್ ಅಳವಡಿಸುವಿಕೆ ಮತ್ತು ನಿರ್ವಹಣೆ.
ವೆಬ್ಸೈಟ್ ಡಿಸೈನಿಂಗ್ ಮತ್ತು ಡಿಜಿಟಲ್ ಮಾರ್ಕೆಟಿಂಗ್.
ನೆಟ್ಸರ್ಫ್ ನೆಟ್ವರ್ಕ್ ಮಾಹಿತಿ ಕೇಂದ್ರ.