ವಿಟ್ಲ: ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಮುಂಭಾಗದ ಕೆರೆಯೊಂದರಲ್ಲಿ ಯುವತಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಕೆಲ ದಿನಗಳ ಹಿಂದೆ ನಡೆದಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ಕು ಮಂದಿಯ ಮೇಲೆ ಪ್ರಕರಣ ದಾಖಲಾಗಿದೆ.
ವಿಟ್ಲ ನಿವಾಸಿಗಳಾದ ಪ್ರಶಾಂತ್, ದಿನೇಶ್, ಯಶವಂತ, ಕೇಪು ನಿವಾಸಿ ರಕ್ಷಿತ್ ಮೇಲೆ ಪ್ರಕರಣ ದಾಖಲಾಗಿದೆ.
ಅ.10 ರಂದು ನಾಪತ್ತೆಯಾದ ಯುವತಿ ನಿಶ್ಮಿತಾ ಅ.11 ರಂದು ದೇವಸ್ಥಾನದ ಪಕ್ಕದ ಕೆರೆಯಲ್ಲಿ ಮೃತ ದೇಹ ಪತ್ತೆಯಾಗಿತ್ತು. ಘಟನಾ ಸ್ಥಳದಲ್ಲಿ ಸಿಕ್ಕ ಯುವತಿಯ ಡೆತ್ ನೋಟ್ ಪ್ರಕಾರ ಆತ್ಮಹತ್ಯೆ ಪ್ರೇರಣೆ ನೀಡಿದ ಬಗ್ಗೆ ತಾಯಿ ನೀಡಿದ ದೂರಿನ ಪ್ರಕಾರ ಪ್ರಕರಣ ದಾಖಲಾಗಿದೆ.
ರಕ್ಷಿತ್ ಉದ್ದೇಶ ಪೂರ್ವಕವಾಗಿ ಯುವತಿಯಲ್ಲಿ ಮಾತನಾಡಿದ್ದನ್ನು ಪ್ರಶಾಂತ್ ಸಹೋದರ ದಿನೇಶ್ ಹಾಗೂ ಯಶವಂತ ಮೊಬೈಲ್ ನಲ್ಲಿ ವಿಡಿಯೋ ಮಾಡಿ ಪ್ರೀತಿ ಮಾಡುತ್ತಿದ್ದ ಪ್ರಶಾಂತ್ ಗೆ ಕಳುಹಿಸಿದ್ದಾರೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.